ಕ್ರೀಡೆ/ಸಿನಿಮಾ

ಜಿಮ್ ನಲ್ಲಿ ವರ್ಕೌಟ್ ಮಾಡಲಾರಂಭಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್,ಅಪ್ಪು ಸ್ಟೈಲ್ ನಲ್ಲೇ ವರ್ಕೌಟ್ ಮಾಡುತ್ತಿರುವ ವೀಡಿಯೋ ವೈರಲ್

ನ್ಯೂಸ್ ನಾಟೌಟ್ : ಪುನೀತ್​ ರಾಜ್​ಕುಮಾರ್ ಅಂದರೆ ಅಭಿಮಾನಿಗಳ ಪಾಲಿಗೆ ದೇವರು. ಮಾನವೀಯತೆ, ಕರುಣೆ ಇದರ ಜತೆಗೆ ಬಾಡಿ ಫಿಟ್​ನೆಸ್​ ಇದೆಲ್ಲವನ್ನು ಮೈಗೂಡಿಕೊಂಡಿದ್ದರು ಅಪ್ಪು. ಅಭಿನಯದಲ್ಲಿ ಬ್ಯುಸಿಯಾಗಿದ್ದರೂ ನಿಸ್ವಾರ್ಥ ಸೇವೆಯನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದರು.ಅಪ್ಪು ಎಂದಾಕ್ಷಣ ನೆನಪಾಗುವ ಮತ್ತೊಂದು ವಿಚಾರವೆಂದರೆ ಅವರ ಬಾಡಿ ಫಿಟ್ನೆಸ್,೪೦ರ ವಯಸ್ಸಲ್ಲೂ ೨೫ರ ಯುವಕರಂತೆ ಕಾಣುತ್ತಿದ್ದ ಅಪ್ಪು ಅವರನ್ನು ಫಾಲೋ ಮಾಡುವವರ ಸಾಲಿನಲ್ಲಿ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಇದೀಗ ಅವರ ಪತ್ನಿ ಕೂಡಾ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಸೇಮ್ ಅಪ್ಪು ಸ್ಟೈಲ್ ನಲ್ಲೇ ವರ್ಕೌಟ್ ಮಾಡುತ್ತಿರುವ ವಿಡಿಯೋಗೆ ನೆಟ್ಟಿಗರು ಶಹಬ್ಬಾಸ್ ಎಂದು ಹೇಳುತ್ತಿದ್ದಾರೆ.

ಅಪ್ಪು ಭರವಸೆಯ ಮಾತುಗಳಿಂದಲೇ ಅಭಿಮಾನಿಗಳ ಪಾಲಿಗೆ ದೇವರಾದರು.ತಮ್ಮ ಕೊನೆಯ ದಿನದವರೆಗೂ ಜಿಮ್​ನಲ್ಲಿ ದೇಹ ದಂಡಿಸಿದ್ದ ಅಪ್ಪು ಅವರು ಯುವಪೀಳಿಗೆಗೆ ಮಾದರಿಯಾಗಿದ್ದರು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಅಷ್ಟರ ಮಟ್ಟಿಗೆ ಪುನೀತ್​ ರಾಜ್​ಕುಮಾರ್ ಅವರು​ ತಮ್ಮ ಬಾಡಿ ಫಿಟ್​ನೆಸ್​ಗೆ ಆದ್ಯತೆ ನೀಡುತ್ತಿದ್ದರು. ತಮ್ಮ ನಿವಾಸದಲ್ಲಿಯೇ ಜಿಮ್​ ಹೊಂದಿದ್ದ ಅಪ್ಪು ಅಲ್ಲಿಯೇ ವರ್ಕೌಟ್​ ಮಾಡುತ್ತಿದ್ದರು.

ನಟ ಪುನೀತ್​ ರಾಜ್​ಕುಮಾರ್​ ದಾರಿಯಲ್ಲಿಯೇ ನಟಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಕೂಡ ಸಾಗುತ್ತಿದ್ದಾರೆ. ಪಿಆರ್​ಕೆ ಪ್ರಾಡಕ್ಷನ್​ ಜವಾಬ್ದಾರಿಯನ್ನು ಹೊತ್ತಿರುವ ಅಶ್ವಿನಿ ಪುನೀತ್​ರಾಜ್​ಕುಮಾರ್​ ತಮ್ಮ ಪತಿಯ ಆಶಯದಂತೆ ಯುವ ಪ್ರತಿಭೆಗಳಿಗೆ ತಮ್ಮ ಪ್ರಾಡಕ್ಷನ್​​ನಲ್ಲಿ ಆದ್ಯತೆ ನೀಡುತ್ತಿದ್ದಾರೆ. ಇದರ ಜೊತೆಯಲ್ಲಿ ಬಾಡಿ ಫಿಟ್​ನೆಸ್​ ವಿಚಾರದಲ್ಲಿಯೂ ಅಶ್ವಿನಿ ಪುನೀತ್​ರಾಜ್​ಕುಮಾರ್​ ತಮ್ಮ ಪತಿಯ ದಾರಿಯನ್ನೇ ಅನುಸರಿಸಿದ್ದಾರೆ. ಪುನೀತ್ ರಂತೆಯೇ ಸಖತ್​ ದೇಹ ದಂಡನೆ ಮಾಡುತ್ತಿರುವ ​​ಇವರು ಕೂಡಾ ಜಿಮ್‌ನಲ್ಲಿ ವರ್ಕೌಟ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ನ್ಯೂಸ್​ ಆಗಿ ಹೊರ ಹೊಮ್ಮಿದೆ.

Related posts

ಕಬಡ್ಡಿ, ವಾಲಿಬಾಲ್ ನಲ್ಲಿ ಮಿಂಚಿದ ಸಂಪಾಜೆ ಪ್ರೌಢ ಶಾಲೆ ವಾಲಿಬಾಲ್ ಕೂಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಲಗ್ಗೆ ಇಟ್ಟ ಸಂಪಾಜೆ ಪ.ಪೂ ಕಾಲೇಜು

ಸಮಂತಾ ಬೆಡ್‌ರೂಮ್‌ ಸೀನ್‌ ವೈರಲ್‌..! ಇಲ್ಲಿದೆ ವೈರಲ್ ವಿಡಿಯೋ

ಸೋನಿಯಾ ಗಾಂಧಿಗೆ ಬರ್ತ್ ಡೇ ವಿಶ್ ಮಾಡಿದ ಮೋದಿ, ಪ್ರಧಾನಿ ಮಾಡಿದ ‘ಟ್ವೀಟ್ ಎಕ್ಸ್’ ನಲ್ಲಿ ಮತ್ತೇನಿದೆ..?