Uncategorized

ರಾಜ್ಯದ ಹೆಸರಾಂತ ಕಬಡ್ಡಿ ಪಟು ಹೊನ್ನಪ್ಪ ಗೌಡರಿಗೆ ಗೌರವ ಸಮರ್ಪಣೆ

ಬೆಂಗಳೂರು: ಅರ್ಜುನ ಪ್ರಶಸ್ತಿ ವಿಜೇತ ಭಾರತ ಕಬಡ್ಡಿ ಪಟು ಹೊನ್ನಪ್ಪ ಗೌಡ ಅವರನ್ನು ಗುರುವಾರ ಸಂಜೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಸನ್ಮಾನಿಸಿದರು. ಹೊನ್ನಪ್ಪ ಗೌಡ ಅವರು ಪ್ರಸ್ತುತ ಆಲ್‌ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್‌ ಸದಸ್ಯರಾಗಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮತ್ತಿಕೆರೆಯ ಹೊನ್ನಪ್ಪ ಅವರ ನಿವಾಸಕ್ಕೆ ಬಂದು ಸಚಿವರು ಗೌರವಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಹರೀಶ್, ವಾರ್ಡ್ ನಂ 45 ಕಾರ್ಪೋರೇಟರ್ ಜಯಪಾಲ್ ಮುನಿಸ್ವಾಮಿ ಗೌಡ, ಮಾಜಿ ಕಾರ್ಪೋರೇಟರ್ ಡಾ.ವಾಸು ಹಾಗೂ ಬೆಂಗಳೂರು ಉತ್ತರ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

Related posts

ಅಬ್ಬಾಬ್ಬ ..ಟೋಮೆಟೋ ರಕ್ಷಣೆಗಾಗಿ ಯಾರು ಬಂದಿದ್ದಾರೆ…ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗ್ತೀರಾ…

ಕೇಂದ್ರ ಬಜೆಟ್ ಕರ್ನಾಟಕಕ್ಕೆ ಭರ್ಜರಿ ಕೊಡುಗೆ, ಸಿಎಂ ಬೊಮ್ಮಾಯಿ ಫುಲ್ ಖುಷ್‌..!

ಬೊಮ್ಮಾಯಿ ಬಜೆಟ್‌ ನಲ್ಲಿ ರೈತರಿಗೆ ಬಂಪರ್‌..5 ಲಕ್ಷದವರೆಗೆ ಸಾಲ ಘೋಷಣೆ