ಕ್ರೀಡೆ/ಸಿನಿಮಾ

ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿ ಕನ್ನಡಿಗರ ಹೃದಯ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್

622
Spread the love

ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಐಪಿಎಲ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ವಾರ್ನರ್ ಪ್ರತಿ ಸಲವೂ ಒಂದೊಂದು ವಿಡಿಯೋ ಮಾಡಿ ಜನರ ಮೆಚ್ಚುಗೆ ಗಳಿಸುತ್ತಾರೆ. ಈ ಸಲ ತನ್ನ ವಿಡಿಯೋಗೆ ಕನ್ನಡ ಹಾಡು ಹಾಕುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅಪ್ಪ – ಮಗಳ ಪ್ರೀತಿಯ ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ಅವರು ಕನ್ನಡದ ಚೌಕ ಸಿನಿಮಾದ ಜನಪ್ರಿಯ ಹಾಡು ಅಪ್ಪ.. ಐ ಲವ್ ಯೂ ಅಪ್ಪ ಸಾಂಗ್ ಅನ್ನು ಹಾಕಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಇಲ್ಲಿದೆ ನೋಡಿ

https://www.instagram.com/p/CSv9jghlCAB/?utm_source=ig_web_copy_link
See also  ನಟಿ ಶಿಲ್ಪಾ ಶೆಟ್ಟಿಗೆ ಕೋಟ್ಯಾಂತರ ರೂ. ಆಸ್ತಿ ವರ್ಗಾಯಿಸಿದ ಪತಿ ರಾಜ್ ಕುಂದ್ರಾ
  Ad Widget   Ad Widget   Ad Widget   Ad Widget   Ad Widget   Ad Widget