ಕರಾವಳಿ

ಬೆಳಾಲಿನ ಆರಿಕೋಡಿ ದೇವಸ್ಥಾನದಲ್ಲಿ ಪವಾಡ..!

ನ್ಯೂಸ್ ನಾಟೌಟ್ : ಮಾನವನ ಪ್ರಯತ್ನದ ಜತೆಗೆ ದೈವಿ ಶಕ್ತಿಯೂ ಜತೆಗಿದ್ದರಷ್ಟೇ ಸಮಸ್ಯೆಗಳೆಲ್ಲ ಪರಿಹಾರವಾಗಿ ಜೀವನದಲ್ಲಿ ಸುಖ- ಶಾಂತಿ -ನೆಮ್ಮದಿ ನೆಲೆಸುತ್ತದೆ. ದೇವರಿಲ್ಲ ಎಂದು ಹೇಳಿಕೊಂಡು ತಿರುಗಾಡುವವರ ನಡುವೆ ದೇವರು ಇದ್ದಾನೆ. ನಮ್ಮ ಸಮಸ್ಯೆಯನ್ನು ಪರಿಹರಿಸಿದ್ದಾನೆ ಅನ್ನುವ ಭಕ್ತ ವರ್ಗವೂ ನಮಗೆ ಕಾಣಸಿಗುತ್ತದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲಿನ ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪವಾಡ ನಡೆದಿದೆ. ನಡೆಯಲು ಸಾಧ್ಯವಾಗದಿದ್ದ ಯುವಕನೊರ್ವ ದೇವಿಗೆ ಹರಿಕೆ ಹೊತ್ತ ನಂತರ ಪವಾಡ ಎಂಬಂತೆ ಕೇವಲ ಒಂದು ತಿಂಗಳಲ್ಲಿ ನಡೆಯಲು ಆರಂಭಿಸಿದ್ದಾನೆ. ಎಲ್ಲ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದಿದ್ದರೂ ಎಲ್ಲಿಯೂ ಗುಣಮುಖವಾಗಿರಲಿಲ್ಲ. ಆದರೆ ಆರಿಕೋಡಿ ಚಾಮುಂಡೇಶ್ವರಿಗೆ ಹರಕೆ ಹೊತ್ತುಕೊಂಡ ನಂತರ ಕೇವಲ ಒಂದು ತಿಂಗಳಲ್ಲಿ ಯುವಕ ಎಲ್ಲರಂತೆ ನಡೆದಾಡುತ್ತಿದ್ದಾನೆ ಅನ್ನುವ ವಿಚಾರ ವೈರಲ್ ಆಗುತ್ತಿದೆ.

ಆರಿಕೋಡಿಯಲ್ಲಿ ಭಕ್ತಸಾಗರ

ಈ ಬಗ್ಗೆ ಮಾತನಾಡಿದ ಯುವಕನ ಪೋಷಕರು ಮಗ ಗುಣಮುಖನಾಗಿರುವುದಕ್ಕೆ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಮಗನನ್ನು ಸ್ನಾನಕ್ಕೆ, ಶೌಚಾಲಯಕ್ಕೆ ಅಥವಾ ಯಾವುದೇ ಕೆಲಸಕ್ಕೆ ಎತ್ತಿಕೊಂಡೇ ಹೋಗಬೇಕಿತ್ತು. ಎಷ್ಟು ಮದ್ದು ಮಾಡಿದರೂ ಏನೇ ಪ್ರಯತ್ನ ನಡೆಸಿದರೂ ಗುಣ ಅನ್ನುವುದು ನಮಗೆ ಸಿಕ್ಕಿರಲಿಲ್ಲ. ಈ ವೇಳೆ ನಮ್ಮ ಸ್ನೇಹಿತರೊಬ್ಬರು ನೀಡಿದ ಸಲಹೆ ಮೇರೆಗೆ ಆರಿಕೋಡಿ ಚಾಮುಂಡಿ ಸನ್ನಿಧಾನಕ್ಕೆ ಬಂದೆವು. ಒಂದು ತಿಂಗಳಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಚಾಮುಂಡಿಯಿಂದ ನಮಗೆ ಅಭಯ ಸಿಕ್ಕಿತು. ಅದರಂತೆ ಒಂದು ತಿಂಗಳಲ್ಲಿ ನಮ್ಮ ಮಗ ಚೇತರಿಸಿ ಇದೀಗ ಎಲ್ಲರಂತೆ ನಡೆದಾಡಲು ಆರಂಭಿಸಿದ್ದಾನೆ ಎಂದು ತಿಳಿಸಿದರು.

ಡಬ ಮೂಲದ ಯುವಕ ಬಾಳಲ್ಲಿ ಇದೀಗ ದೇವಿಯು ಹೊಸ ಬೆಳಕನ್ನು ಸೃಷ್ಟಿಸಿದ್ದಾಳೆ. ಈ ಹಿಂದೆಯೂ ಆರಿಕೋಡಿ ದೇವಸ್ಥಾನದಲ್ಲಿ ಹಲವು ಪವಾಡಗಳು ನಡೆದಿದ್ದವು. ಇದೀಗ ದಿನದಿಂದ ದಿನಕ್ಕೆ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಚಾಮುಂಡಿಗೆ ಹರಕೆ ಹೊತ್ತರೆ ಎಲ್ಲ ಕಷ್ಟನಷ್ಟಗಳು ಪರಿಹಾರ ಆಗುತ್ತದೆ ಅನ್ನುವ ನಂಬಿಕೆ ಇಲ್ಲಿಗೆ ಭೇಟಿಕೊಟ್ಟ ಜನರದ್ದಾಗಿದೆ.

Related posts

ನ. 17 ಮತ್ತು 18 ರಂದು ಸುಳ್ಯದಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿ ಅದ್ಧೂರಿ ಪಂದ್ಯಾಟ, ರಾಷ್ಟ್ರಮಟ್ಟದ ಆಟಗಾರರ ಸಮಾಗಮ

ಸುಬ್ರಹ್ಮಣ್ಯ,ಸುಳ್ಯ ಭಾಗದಲ್ಲಿ ಧಾರಾಕಾರ ಮಳೆ, ಕೆಲವೆಡೆ ಹಾನಿ

ಸುಬ್ರಹ್ಮಣ್ಯ: ಮೂಗ ಅಳಿಯನನ್ನು ಹೊರಹಾಕಿದ ಅತ್ತೆ, ರಸ್ತೆಗೆ ಬಿದ್ದ ವ್ಯಕ್ತಿಗೆ ಸಹೃದಯಿಗಳ ಸಹಾಯ