ಕ್ರೈಂ

ಅರಂತೋಡು: ವಿಷ ಸೇವಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ಹಿರಿಯ ಕಾರು ಚಾಲಕ ಸಾವು, ಫಲ ಕೊಡದ ಗಂಭೀರ ಸ್ಥಿತಿಯಲ್ಲಿದ್ದ ಶೇಷಪ್ಪಣ್ಣನ ಉಳಿಸುವ ಪ್ರಯತ್ನ

ನ್ಯೂಸ್ ನಾಟೌಟ್: ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಂಬಾಸಿಡರ್ ಕಾರು ಚಾಲಕ ಶೇಷಪ್ಪ ಗೌಡ ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹಿರಿಯ ಡ್ರೈವರ್ ಆಗಿ ಸುಳ್ಯ ಹಾಗೂ ಅರಂತೋಡು ಭಾಗದಲ್ಲಿ ಹೆಚ್ಚಿನ ಒಡನಾಟ ಹೊಂದಿದ್ದರು. ಪಾಲ್ತಾಡಿನ ಶೇಷಪ್ಪ ಗೌಡ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವನೆ ಮಾಡಿದ್ದರು. ರಬ್ಬರ್ ಗೆ ಬಳಸುವ ಆಸಿಡ್ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿಂದ ಮರಳಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

Related posts

ಸುಳ್ಯ: ಹಿಂದೂ ಯುವತಿಯ ಫೋನ್ ನಂಬರ್ ಕೇಳಿದ ಅನ್ಯಕೋಮಿನ ಯುವಕ, ಪೆಟ್ರೋಲ್ ಪಂಪ್ ನಲ್ಲಿದ್ದವರನ್ನ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು..!

ಅಪ್ಪನ ಆತ್ಮಹತ್ಯೆಯಿಂದ ನೊಂದಿದ್ದ ಮಗನೂ ಆತ್ಮಹತ್ಯೆಗೆ ಶರಣು

ರಷ್ಯಾ ಯುದ್ಧ ಭೂಮಿಯಲ್ಲಿ ಕೇರಳದ ವ್ಯಕ್ತಿ ಸಾವು ಪ್ರಕರಣ..! ಯುವಕರನ್ನು ವಂಚಿಸಿ ರಷ್ಯಾಕ್ಕೆ ಕರೆದೊಯ್ಯಲು ಸಹಾಯ ಮಾಡಿದ್ದ ಮೂವರ ಬಂಧನ..!