ಕರಾವಳಿಸುಳ್ಯ

ಅರಂತೋಡು: ಅನುಮಾನಸ್ಪದವಾಗಿ ಕಡವೆಯ ಶವ ಪತ್ತೆ..! ಬೇಟೆಗಾರರು ಗುಂಡಿಟ್ಟು ಹತ್ಯೆ ಮಾಡಿರುವ ಶಂಕೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಎಂಬಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಕಡವೆಯ ಮೃತದೇಹ ಸಿಕ್ಕಿದೆ.

ಬೇಟೆಗಾರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಅನ್ನುವ ಶಂಕೆ ವ್ಯಕ್ತವಾಗಿದೆ. ಅರಂತೋಡಿನ ಉಕ್ರಾಜೆ ಬೈಲು ಎಂಬಲ್ಲಿ ಕಡವೆಯ ಮೃತದೇಹ ಸಿಕ್ಕಿದ್ದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕಳೆದ ಬುಧವಾರ ತಡರಾತ್ರಿ ಉಕ್ರಾಜೆ ಬೈಲು ಮೀಸಲು ಅರಣ್ಯ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಸಿದೆ ಎಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಬೇಟೆಗಾರರು ಇರಬಹುದು ಅನ್ನುವ ಸಂಶಯ ಸ್ಥಳೀಯರಲ್ಲಿ ಮೂಡಿದೆ.

ಇದೀಗ ಸ್ಥಳಕ್ಕೆ ಸುಳ್ಯ ಅರಣ್ಯಾಧಿಕಾರಿಗಳು ಆಗಮಿಸುವ ನಿರೀಕ್ಷೆ ಇದೆ. ಶನಿವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಸಾವಿಗೆ ನೈಜ ಕಾರಣ ಏನು ಅನ್ನುವುದು ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

ಚೆಂಬು ಗ್ರಾಮದ ಬೊಲೆರೊ ಜೀಪ್ ಕಡಬದಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಮಗು ಸಹಿತ ಮೂವರು ಪವಾಡ ಸದೃಶ ಪಾರು

ಸುಳ್ಯದ ಸಂತ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ಡಿಂಡಿಮ..! ಗಮನ ಸೆಳೆದ ವಿದ್ಯಾರ್ಥಿಗಳೇ ರಚಿಸಿದ ಕರ್ನಾಟಕದ ನಕ್ಷೆ ಇಲ್ಲಿದೆ ನೋಡಿ..

ನಾಲ್ವರು ಸಿಬ್ಬಂದಿಗೆ ಕರೋನಾ, ಸುಳ್ಯ ನ್ಯಾಯಾಲಯದಲ್ಲಿ ಕಟ್ಟೆಚ್ಚರ