Uncategorized

ಕರ್ನಾಟಕದ ಸಿಂಗಂ,ಬಿಜೆಪಿ ನಾಯಕ ಇನ್ಮುಂದೆ ನಟ..!ಗಮನ ಸೆಳೆದ ಅಣ್ಣಾಮಲೈ ನಟನೆಯ ಅರಬ್ಬೀ ಚಿತ್ರದ ಟ್ರೈಲರ್..!

ನ್ಯೂಸ್‌ ನಾಟೌಟ್‌ : ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಮಾಜಿ ಎಪಿಎಸ್​ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಇನ್ಮುಂದೆ ನಟ..! ಹೌದು, ಅಣ್ಣಾಮಲೈ ಅಭಿನಯದ ಚೊಚ್ಚಲ ಕನ್ನಡ ಚಿತ್ರ ಅರಬ್ಬೀಯ ಟ್ರೈಲರ್​ ಬಿಡುಗಡೆಯಾಗಿದೆ.

2020ರಲ್ಲಿ ಐಪಿಎಸ್​ ಹುದ್ದೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡ ಬಳಿಕ ಅಣ್ಣಾಮಲೈ ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ್ದರು. ಕೆಲವು ಆ್ಯಕ್ಷನ್ ದೃಶ್ಯಗಳಲ್ಲಿ ಸಹ ಅವರು ಪಾಲ್ಗೊಂಡಿದ್ದರು. ಇದೀಗ ಆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.ಚಿತ್ರದ ನಾಯಕನಿಗೆ ಇಲ್ಲಿ ಎರಡೂ ಕೈಗಳೇ ಇಲ್ಲ.ಆದರೆ ಎರಡೂ ಕೈಗಳೇ ಇಲ್ಲದ ಈ ಹೀರೋಗೆ ರಿಯಲ್ ಲೈಫ್‌ನಲ್ಲಿ ಪೊಲೀಸ್ ಆಫೀಸರ್ ಆಗಿದ್ದ ಅಣ್ಣಾಮಲೈ ಎಲ್ಲ ಅನ್ನೋದು ಇಲ್ಲಿ ವಿಶೇಷವೆಂಬಂತಿದೆ. ನಿಜ ಜೀವನದಲ್ಲಿ ಹೇಗೆ ಇದ್ದಾರೋ ಅದೇ ರೀತಿಯ ಸಿನಿಮಾದಲ್ಲಿ ಅಣ್ಣಾಮಲೈ ಕಾಣಿಸಿಕೊಂಡಿದ್ದಾರೆ. ಫೈಟಿಂಗ್ ಕೂಡ ಮಾಡಿ ಗಮನ ಸೆಳೆದಿದ್ದಾರೆ.

ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಕನ್ನಡಿಗ ಕೆಎಸ್ ವಿಶ್ವಾಸ್ ಅವರ ಜೀವನದ ಬಗ್ಗೆ ಕಥೆ ಹೆಣೆಯಲಾಗಿದೆ.ಅರಬ್ಬೀ ಸಿನಿಮಾವು ಡಿಫರೆಂಟಾಗಿ ಕೈಗಳು ಇಲ್ಲದ ನಾಯಕ ಸಮಾಜದಲ್ಲಿ ಹೇಗೆ ಸಮಸ್ಯೆಗಳನ್ನು ಎದುರಿಸಿದರು. ಅದೆಲ್ಲವನ್ನೂ ಮೆಟ್ಟಿನಿಂತು ಹೇಗೆ ಮೇಲೆ ಬಂದರು,ಹೇಗೆ ಸಾಧನೆ ಮಾಡಿದರು ಅನ್ನುವ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಅರಬ್ಬೀ ಸಿನಿಮಾನಲ್ಲಿ ವಿಶ್ವಾಸ್​ರ ತರಬೇತುದಾರನ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ. ಅಣ್ಣಾಮಲೈ ಕೆಲವು ಆ್ಯಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕೆಲವು ಖಡಕ್ ಡೈಲಾಗ್​ಗಳನ್ನು, ಸ್ಪೂರ್ತಿದಾಯಕ ಡೈಲಾಗ್​ಗಳನ್ನು ಸಹ ಸಿನಿಮಾದಲ್ಲಿ ಹೇಳಿದ್ದಾರೆ. ಅರಬ್ಬೀ ಸಿನಿಮಾವನ್ನು ಆರ್.ರಾಜ್​ಕುಮಾರ್ ನಿರ್ದೇಶನ ಮಾಡಿದ್ದು, ಸಿಎಸ್ ಚೇತನ್ ನಿರ್ಮಾಣ ಮಾಡಿದ್ದಾರೆ.ಸಿನಿಮಾದ ಸಹ ನಿರ್ಮಾಣವನ್ನು ಅನಿತಾ ಸಿದ್ಧೇಶ್ವರ್ ಮಾಡಿದ್ದಾರೆ. ಸಿನಿಮಾಕ್ಕೆ ಕಂಬದ ರಂಗ ಸಂಗೀತ ನೀಡಿದ್ದಾರೆ.

Related posts

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಸಮಾರಂಭ ಹೇಗಿತ್ತು ಗೊತ್ತಾ?

ಪತ್ನಿ ಗರ್ಭಿಣಿಯಾಗುತ್ತಲೇ ಕೈಕೊಟ್ಟು ಓಡಿದ ಪಿಡಿಓ

ದಿಲ್ಲಿಯಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ, ತುರ್ತು ಭೂ ಸ್ಪರ್ಶದ ಬಳಿಕ ತಿಳಿದು ಬಂದಿದ್ದೇನು..?