ದೇಶ-ಪ್ರಪಂಚ

ಮದುವೆ ಸಂಭ್ರಮದಲ್ಲಿದ್ದ ನವಜೋಡಿಗೆ ಕಾದಿತ್ತು ಊಹಿಸಲಾರದ ದುರಂತ: ಮುಖವನ್ನೇ ಸುಟ್ಟುಕೊಂಡ ವಧು! ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಮದುವೆ ಎನ್ನುವುದು ಜೀವನದಲ್ಲಿ ಬಹುಮುಖ್ಯವಾದ ದಿನ. ಕೆಲವರು ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಿದ್ರೆ, ಇನ್ನು ಕೆಲವರು ಈ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳುತ್ತಾರೆ. ಇತ್ತೀಚೆಗೆ ಮದುವೆ ಕಾರ್ಯಕ್ರಮ ಎಲ್ಲರಿಗಿಂತಲೂ ವಿಭಿನ್ನವಾಗಿ ಇರಬೇಕು, ಸದಾ ಕಾಲ ನೆನಪಿಡುವಂತೆ ಆಗಬೇಕು ಎಂದು ಯೋಚಿಸುವವರೇ ಅಧಿಕ ಮಂದಿ.ಹಾಗೆ ಮದುವೆಯನ್ನು ವಿಸೇಷವಾಗಿ ಆಚರಿಸಲು ಹೋಗಿ ವಧುವೊಬ್ಬಳು ತನ್ನ ಅಂದವಾದ ಮುಖವನ್ನೇ ಸುಟ್ಟು ಕೊಂಡ ಘಟನೆ ಬಾರಿ ವೈರಲ್ ಆಗಿದೆ.

ಬದಲಾದ ಕಾಲದಲ್ಲಿ ಮದುವೆ ಟ್ರೆಂಡ್ ಕೂಡ ಬದಲಾಗಿದೆ. ಮದುವೆ ಮುಂಚಿತವಾಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟಿಂಗ್, ಮದುವೆ ದಿನ ವಿಶೇಷವಾಗಿ ಡೆಕೋರೇಶನ್, ಇದಲ್ಲದೆ ನೆನಪಿಗೋಸ್ಕರ ಈ ಎಲ್ಲಾ ಕಾರ್ಯಕ್ರಮ ವಿಡಿಯೋ, ಫೋಟೋಗಳ ಮೂಲಕ ಸೆರೆ ಹಿಡಿಯಲಾಗುತ್ತದೆ. ಇನ್ನು ನಿಶ್ಚಿತಾರ್ಥ, ಮದುವೆ, ರಿಸೆಪ್ಶನ್ ವೇಳೆ ಕೇಕ್ ಕಟ್ ಮಾಡುವುದು ರೂಢಿಯಾಗಿದೆ. ಸಂಭ್ರಮದಿಂದ ಆಚರಿಸುವ ವೇಳೆ ಎಷ್ಟೋ ಜೋಡಿಗಳು ಎಡವಟ್ಟು ಮಾಡಿಕೊಂಡಿದ್ದು ಇದೆ.ಇದೀಗ ಇಲ್ಲೊಂದು ನವಜೋಡಿ ಕೇಕ್ ಕಟ್ ಮಾಡುವ ವೇಳೆ ಊಹಿಸದ ದುರಂತ ಸಂಭವಿಸಿದೆ. ಸದ್ಯ ಇವರ ವಿಡಿಯೋ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ವಧು-ವರ ರಿಸೆಪ್ಶನ್​ ವೇದಿಕೆಯಲ್ಲಿ ಕೇಕ್ ಮುಂದೆ ಇಟ್ಟು ಕೈಯಲ್ಲಿ ಸ್ಪಾರ್ಕ್ಲಿಂಗ್ ಬಂದೂಕು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಗನ್​ ಟ್ರಿಗರ್​ ಒತ್ತಿದ್ದಾರೆ. ಆದರೆ ಈ ವೇಳೆ ವಧು ಗನ್​ ಟ್ರಿಗರ್ ಒತ್ತುತ್ತಿದ್ದಂತೆ ಗನ್​ ಸ್ಫೋಟಗೊಂಡು, ಬೆಂಕಿ ಕಿಡಿ ಆಕೆಯ ಮುಖಕ್ಕೆ ತಾಗಿದೆ. ತಕ್ಷಣ ಗಾಬರಿಯಾದ ವಧು ಹೆದರಿ ಕಿರುಚಿಕೊಂಡು ಓಡಿದ್ದಾಳೆ. ವಧುವಿನ ಮುಖಕ್ಕೆ ಬೆಂಕಿ ತಾಗಿದ್ದರಿಂದ ಒಂದು ಕ್ಷಣ ಸ್ಥಳದಲ್ಲಿದ್ದವರೂ ಕೂಡ ಗಾಬರಿಯಾಗಿದ್ದಾರೆ.ಇದು ಮಹಾರಾಷ್ಟ್ರದಲ್ಲಿ ನಡೆದ ಮದುವೆ ಕಾರ್ಯಕ್ರಮ ಎಂದು ವರದಿ ತಿಳಿಸಿದೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ದೃಶ್ಯ ಭಯಾನಕವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಇದೆಲ್ಲಾ ಬೇಕಿತ್ತಾ ಎಂದು ವ್ಯಂಗ್ಯ ಮಾಡಿದ್ದಾರೆ.

Related posts

Soldier Missing: ಈದ್ ಹಬ್ಬಕ್ಕೆಂದು ಮನೆಗೆ ಬಂದಿದ್ದ ಯೋಧ ದಿಢೀರ್ ನಾಪತ್ತೆ,ಕಾರಲ್ಲಿ ರಕ್ತದ ಕಲೆ ಪತ್ತೆ,ತೀವ್ರ ಹುಡುಕಾಟ

ಪೊಲೀಸ್ ಠಾಣೆಯ ಒಳಗೆಯೇ ಮಹಿಳಾ ಪೇದೆ ಮೇಲೆ ಅತ್ಯಾಚಾರ! ಏನಿದು ಅಮಾನುಷ ಘಟನೆ?

ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ್ದಕ್ಕೆ ಪೇದೆ ಮೇಲೆಯೇ ಕೈ ಮಾಡಿದ ಅಣ್ಣ!! ಏನಿದು ಘಟನೆ?