ಬೆಂಗಳೂರು

ದುಬೈನಿಂದ ಬೆಂಗಳೂರಿಗೆ ಗೆಳೆಯನ ಭೇಟಿಗಾಗಿ ಬಂದಿದ್ದ ಗಗನಸಖಿ ಸಾವು; ಅವರ ಮಧ್ಯೆ ನಡೆದಿದ್ದಾದರೂ ಏನು?

ನ್ಯೂಸ್ ನಾಟೌಟ್: ಶುಕ್ರವಾರ ಮಧ್ಯರಾತ್ರಿ ರೇಣುಕಾ ರೆಸಿಡೆನ್ಸಿಯ ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋರಮಂಗಲದ ಎಂಟನೇ ಬ್ಲಾಕ್‌ನಲ್ಲಿ ನಡೆದಿದೆ. ಇದು ಆತ್ಮಹತ್ಯೆಯೋ? ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 28 ವರ್ಷದ ಅರ್ಚನಾ ಧೀಮನ್ ಸಾವನ್ನಪ್ಪಿದ ಯುವತಿ.

ಘಟನೆಯ ವಿವರ

ಅರ್ಚನಾ ಹಿಮಾಚಲ ಪ್ರದೇಶ ಮೂಲದವಳು ಎಂದು ತಿಳಿದುಬಂದಿದೆ. ಪ್ರತಿಷ್ಠಿತ ಏರ್‌ಲೈನ್ಸ್‌ನಲ್ಲಿ ಗಗನಸಖಿ ಆಗಿ ಕೆಲಸ ಮಾಡುತ್ತಿದ್ದಳು. ದುಬೈನಿಂದ ಗೆಳೆಯ ಆದೇಶ್ ಎಂಬಾತನ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದಳು. ಆದೇಶ್ ಕೇರಳ ಮೂಲದ ಐಟಿ ಉದ್ಯೋಗಿಯಾಗಿದ್ದ. ಕೆಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಅದರಂತೆ ನಿನ್ನೆ ಬೆಂಗಳೂರಿಗೆ ಗೆಳೆಯನನ್ನು ಭೇಟಿ ಮಾಡಲು ಬಂದಿದ್ದಳು ಎಂಬ ಮಾಹಿತಿ ಸಿಕ್ಕಿದೆ. ಇದೀಗ ಅರ್ಚನಾ ಸಾವಿನಿಂದ ಗೆಳೆಯ ಆದೀಶ್ ಸುತ್ತ ಅನುಮಾನ ಮೂಡಿದೆ. ಶುಕ್ರವಾರ ರಾತ್ರಿ ಇಬ್ಬರ ಮಧ್ಯೆ ಏನಾಗಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಬ್ಬರ ಮಧ್ಯೆ ಜಗಳ ನಡೆದು ಅರ್ಚನಾಳನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಲಾಗಿದೆಯಾ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಮಹಿಳೆಯರ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಕೆ! ಸಂಧಾನಕ್ಕೆ ಕರೆಸಿ ಚುಚ್ಚಿ ಕೊಲೆಗೈದ ಯುವಕರು!

ಬಿಗ್‌ ಬಾಸ್‌ ಮನೆಯಲ್ಲಿ ಪತ್ನಿ ಕೈಯಿಂದ ಒದೆ ತಿಂದ ತುಕಾಲಿ..!ತುಕಾಲಿ ಅವತಾರಕ್ಕೆ ಬಿದ್ದು ಬಿದ್ದು ನಗಾಡಿದ ಸ್ಪರ್ಧಿಗಳು;ವೈರಲ್ ವಿಡಿಯೋ ವೀಕ್ಷಿಸಿ

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ ತೆಗೆದುಕೊಳ್ಳುತ್ತಾ ಸಿದ್ದು ಸರ್ಕಾರ? ಎಮ್ಮೆ, ಕೋಣಗಳನ್ನು ಕಡಿಯುವುದಾದ್ರೆ ಹಸುಗಳನ್ನೇಕೆ ಕಡಿಯಬಾರದು? ಏನಿದು ಪಶುಸಂಗೋಪನೆ ಸಚಿವನ ಪ್ರಶ್ನೆ?