Uncategorized

ಪ್ರವಾಸಕ್ಕೆ ಬಂದಿದ್ದ ತರಬೇತಿ ನಿರತ ಸೇನಾಧಿಕಾರಿಗಳ ಮೇಲೆ ದಾಳಿ..! ಗನ್ ತೋರಿಸಿ ಗರ್ಲ್ ಫ್ರೆಂಡ್ ಮೇಲೆ ಗ್ಯಾಂಗ್ ರೇಪ್..!

ನ್ಯೂಸ್ ನಾಟೌಟ್: ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ತರಬೇತಿ ನಿರತ ಸೇನಾಧಿಕಾರಿಗಳ ಮೇಲೆ ಡಕಾಯಿತರು ದಾಳಿ ನಡೆಸಿದ್ದು ಮಾತ್ರವಲ್ಲದೇ ಜೊತೆಗಿದ್ದ ಅವರ ಸ್ನೇಹಿತೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ಬುಧವಾರ(ಸೆ.12) ಈ ಘಟನೆ ನಡೆದಿದ್ದು, ಮಹೌ ಕಂಟೋನ್ಮೆಂಟ್ ಪ್ರದೇಶದ ಇನ್ಫ್ಯಾಂಟ್ರಿ ಸ್ಕೂಲ್ ನಲ್ಲಿ ಯುವ ಅಧಿಕಾರಿಗಳಾಗಿ ತರಬೇತಿ ಪಡೆಯುತ್ತಿದ್ದ, 23 ಹಾಗೂ 24 ವಯಸ್ಸಿನ ಇಬ್ಬರು ಅಧಿಕಾರಿಗಳು ಪಿಕ್ ನಿಕ್ ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಬಡಗೊಂಡ ಪೊಲೀಸ್ ಠಾಣಾಧಿಕಾರಿ ಲೋಕೇಂದ್ರ ಸಿಂಗ್ ಹಿರೋರ್ ಹೇಳಿದ್ದಾರೆ.

ಬುಧವಾರ ನಸುಕಿನ 2 ಗಂಟೆಯ ವೇಳೆಗೆ ಏಳು ಮಂದಿ ಅಪರಿಚಿತರು ಮಹೌ- ಮಂಡಲೇಶ್ವರ ರಸ್ತೆಯ ಈ ಪಿಕ್ನಿಕ್ ತಾಣಕ್ಕೆ ಬಂದು, ಅಲ್ಲಿ ಕಾರಿನಲ್ಲಿ ಕುಳಿತಿದ್ದ ಅಧಿಕಾರಿ ಹಾಗೂ ಯುವತಿಯನ್ನು ಥಳಿಸಿದರು. ಈ ವೇಳೆ ಓರ್ವ ಯುವತಿಯ ಮೇಲೆ ದುಷ್ಕರ್ಮಿಗಳು ಗನ್ ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಇಬ್ಬರು ಯುವತಿಯರನ್ನು ವಶದಲ್ಲಿಟ್ಟುಕೊಂಡು ಹಣ ತರಲು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಮತ್ತೋರ್ವ ಅಧಿಕಾರಿ ಸಮೀಪದಲ್ಲೇ ಇದ್ದ ಸೇನಾ ಕ್ಯಾಂಪ್ ಗೆ ಓಡಿ ಬಂದು ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪೊಲೀಸರನ್ನು ನೋಡಿದ ತಕ್ಷಣ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಅತ್ಯಾಚಾರ ಎಸಗಿದ್ದನ್ನು ವೈದ್ಯಕೀಯ ಪರೀಕ್ಷೆ ದೃಢಪಡಿಸಿದೆ. ಕಾರ್ಯಾಚರಣೆ ಮುಂದುವರಿದಿದೆ.

Click

https://newsnotout.com/2024/09/first-night-man-ask-adhar-with-girl-jain-caste-kannada-news-viral/
https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/masjid-kannada-news-darga-of-muslim-and-ganesha-chaturti-issue/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/

Related posts

ಮಂಗಳೂರಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ,ನೈತಿಕ ಪೊಲೀಸ್ ಗಿರಿ ಬಗ್ಗೆ ಮಹತ್ವದ ಸೂಚನೆ ನೀಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ,ಏನು ಹೇಳಿದ್ರು?

ಪ್ರೇಮ ವೈಫಲ್ಯದಿಂದ ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣ:ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ

ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ನೂತನ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ