ಕ್ರೀಡೆ/ಸಿನಿಮಾ

‘ಒದ್ದೆ ಕೂದಲಲ್ಲಿ ಗಂಡನಿಗೆ ಟೀ ಕುಡಿಸಿ ನೋಡಿ’ ಅಮಿತಾಬ್ ಈ ರೀತಿ ಸಲಹೆ ಕೊಟ್ಟಿದ್ಯಾರಿಗೆ? ಅಷ್ಟಕ್ಕೂ ಈ ಟಿಪ್ಸ್‌ ಕೊಟ್ಟಿದ್ದೇಕೆ?

ನ್ಯೂಸ್ ನಾಟೌಟ್ : ಅಮಿತಾಬ್ ​ ಬಚ್ಚನ್ (Amitabh Bachchan) ಬಾಲಿವುಡ್​ ಕಂಡ ಪ್ರತಿಭಾನ್ವಿತ ನಟ.ಈ 80ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿದ್ದಾರೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.  ಇದೀಗ ಕೌನ್​ ಬನೇಗಾ ಕರೋರ್​ಪತಿ (KBC)ಯ 15ನೇ ಸೀಸನ್​ನಲ್ಲಿ ಅದೇ ಉತ್ಸಾಹದಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದಾರೆ.

ಕೌನ್​ ಬನೇಗಾ ಕರೋರ್​ಪತಿಯಲ್ಲಿ ಅವರು ಸದಾ ಸ್ಪರ್ಧಿಗಳನ್ನು ನಗಿಸುತ್ತಲೇ ಇರುತ್ತಾರೆ. ಈ ಕಾರಣಕ್ಕಾಗಿಯೇ ಆ ಪ್ರೋಗ್ರಾಂ ತುಂಬಾ ಪ್ರಸಿರ್ದಧಿಯನ್ನು ಪಡೆದಿದೆ.ಇದೀಗ ಸ್ಪರ್ಧಿಯೊಬ್ಬರ ಪತ್ನಿಗೆ ಟಿಪ್ಸ್​ ನೀಡುವ ಮೂಲಕ ಜನರನ್ನು ಇನ್ನಷ್ಟು ನಕ್ಕು ನಗಿಸಿದ್ದಾರೆ. ರೂಪಕ್​ ಕುಮಾರ್​ ಎನ್ನುವ ಸ್ಪರ್ಧಿ  ‘ಫಾಸ್ಟೆಸ್ಟ್ ಫಿಂಗರ್ ಫಸ್ಟ್’ ಸುತ್ತಿನ ನಂತರ ಹಾಟ್‌ಸೀಟ್ ನಲ್ಲಿ ಕುಳಿತುಕೊಂಡರು.  ಬಿಹಾರದ ಬೇಗುಸರೈ ಮೂಲದವರಾದ ಇವರು,  ಅಸ್ಸಾಂನ ಪೆಟ್ರೋಲಿಯಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಂತರ ಹೀಗೆ ಮಾತನಾಡುವ ಸಮಯದಲ್ಲಿ, ಅಭಿಮಾನ್​ ಚಿತ್ರದಲ್ಲಿ  ಜಯಾ ಬಚ್ಚನ್ ಅವರು ಒದ್ದೆಯಾದ ಕೂದಲಿನಲ್ಲಿ ಟೀ ಕಪ್​ ಹಿಡಿದುಕೊಂಡು ಅಮಿತಾಭ್​ ಬಳಿ ಬಂದು ಪ್ರೇಮದ ನೋಟವನ್ನು ಬೀರುವ ದೃಶ್ಯವನ್ನು ವರ್ಣಿಸಿದ ರೂಪಕ್​ ಅವರು ಆ ದೃಶ್ಯವು ನನಗೆ ತುಂಬಾ ಇಷ್ಟ ಎಂದರು.  

ಈ ರೀತಿ ಹೇಳುತ್ತಿದ್ದ ಹಾಗೆ ಅವರ ಪತ್ನಿ ಸರಿತಾ ಅವರತ್ತ ಹೊರಳಿದ ಅಮಿತಾಭ್​ ಬಚ್ಚನ್​ ಅವರು, ನೀವೂ ಒಮ್ಮೆ ಕೂದಲು ಒದ್ದೆ ಮಾಡಿಕೊಂಡು ಟೀ ಕಪ್​ ಹಿಡಿದು ಪತಿಯ ಬಳಿ ಬಂದು ಅವರ ಆಸೆ ಈಡೇರಿಸುವಂತೆ ಹೇಳಿದ್ದಾರೆ..!ಈ ಮಾತಿಗೆ ಅಲ್ಲಿದ್ದವರೆಲ್ಲಾ ನಕ್ಕು ನಕ್ಕು ಸುಸ್ತಾದರು. ಆಗ ಸರಿತಾ ಅವರು, ಪತಿ ಟೀ ಕುಡಿಯುವುದೇ ಇಲ್ಲ ಎಂದರು. ಕೂಡಲೇ ರೂಪಕ್​ ಅವರು, ಈಗ ಬೇಕಿದ್ರೆ ಟೀ ಕುಡಿಯುತ್ತೇನೆ ಎಂದಾಗ, ಅಮಿತಾಭ್​ ತಮ್ಮ ಎಂದಿನ ಹಾಸ್ಯದ ಚಟಾಕಿಯಲ್ಲಿ ನೀವು ಕೂದಲು ಒದ್ದೆ ಮಾಡಿಕೊಂಡು ಟೀ ಕಪ್​ ಹಿಡಿದು ಬನ್ನಿ, ಆಮೇಲೆ ನೋಡಿ ಬೇಡ ಎಂದರೂ ಮೂರ್ನಾಲ್ಕು ಕಪ್​ ಟೀ ಅವರ ಹೊಟ್ಟೆಗೆ ಹೋಗುತ್ತದೆ ಎಂದು ತಮಾಷೆ  ಮಾಡಿದರು. 

Related posts

ಇಂದು ಸೌಂದರ್ಯ ಅಭಿಮಾನಿಗಳ ಪಾಲಿಗೆ ಕರಾಳ ದಿನ,ಖ್ಯಾತ ನಟಿ ನಮ್ಮನ್ನಗಲಿ 19 ವರ್ಷ

ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಪಿಗ್ಗಿ,ತಂದೆಯಂತೆಯೇ ಮಗಳು ಎಂದ ನೆಟ್ಟಿಗರು

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಧಿಕೃತ ವಿದಾಯ ಘೋಷಿಸಿದ ನಟ ಕಿಚ್ಚ ಸುದೀಪ್, ಏನಿದೆ ವಿದಾಯ ಮಾತಿನಲ್ಲಿ..?