ಕ್ರೈಂರಾಜ್ಯವಿಡಿಯೋವೈರಲ್ ನ್ಯೂಸ್

10 ಕ್ಕೂ ಹೆಚ್ಚು ಜನರ ಗುಂಪು ಅಮೆಜಾನ್ ಕಚೇರಿಗೆ ನುಗ್ಗಿ ಡೆಲಿವರಿ ಬಾಯ್ ಮೇಲೆ‌ ಹಲ್ಲೆ..! ನಾಲ್ವರು ಪೊಲೀಸ್ ವಶಕ್ಕೆ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಅಮೆಜಾನ್ ಕಚೇರಿಗೆ 10 ಕ್ಕೂ ಹೆಚ್ಚು ಜನರ ಗುಂಪು ನುಗ್ಗಿ‌ ಡೆಲಿವರಿ ಬಾಯ್ ಮೇಲೆ‌ ಮಾರಣಾಂತಿಕ‌ ಹಲ್ಲೆ ನಡೆಸಿರುವ ಘಟನೆ‌ ಮಂಗಳವಾರ(ಆ.21) ಬೀದರ್ ನ ಆದರ್ಶ ಕಾಲೋನಿಯ‌ಲ್ಲಿ ನಡೆದಿದೆ.

ಸಿಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿರುವ ವಿಡಿಯೋ ವೈರಲ್ ಆಗಿದೆ. ಹಲ್ಲೆ ಮಾಡಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಗೌಳಿ ಗಲ್ಲಿಯ ವಿಜಯಕುಮಾರ ಬಿಡಕರ್‌ ಹಲ್ಲೆಗೊಳಗಾದ ಡೆಲವರಿ ಬಾಯ್. ಹಿರಿಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡುತ್ತಿದ್ದಾಗ, ಬುದ್ದಿ ಹೇಳಿ‌ ಬಿಡಿಸಿದ ಕಾರಣಕ್ಕೆ ಇಲ್ಲಿನ‌ ಬದ್ರೋದ್ದೀನ್ ಕಾಲೋನಿಯ ಮಹಮ್ಮದ್ ಅದ್ನಾನ್‌ ಮತ್ತು ಆತನ 10ಕ್ಕೂ ಹೆಚ್ಚು ಜನ‌ ಈ ಕೃತ್ಯ‌ ಎಸಗಿದ್ದಾರೆ ಎನ್ನಲಾಗಿದೆ.

ಮಂಗಳವಾರ ಪಾರ್ಸಲ್ ಗಳನ್ನು ಡೆಲಿವರಿ ಮಾಡಿ‌ ಕಚೇರಿಗೆ ‌ವಾಪಸ್ ತೆರಳುವಾಗ ಅದ್ನಾನ್‌ ಮತ್ತು ಇನ್ನಿಬ್ಬರು ವ್ಯಕ್ತಿಯೊಬ್ಬರ ಜತೆ ಜಗಳ ಆಡುತ್ತಿದ್ದರು.‌ ಇದನ್ನು ಗಮನಿಸಿ ತಡೆಯಲು ಮುಂದಾದ ವಿಜಯಕುಮಾರ‌ಗೆ ನಿಂದಿಸಿದಲ್ಲದೇ, ಹಲ್ಲೆ ಮಾಡಿದ್ದಾರೆ. ಈ ವೇಳೆ ವಿಜಯಕುಮಾರ‌ನ ಪರಿಚಿತರೊಬ್ಬರು ತಡೆದಿದ್ದಾರೆ. ಅಲ್ಲಿಂದ‌ ಕಾಲ್ಕಿತ್ತ ಅದ್ನಾನ್, ನಂತರ 10 ಕ್ಕೂ ಹೆಚ್ಚು ಯುವಕರ ಜತೆಗೆ ಅಮೆಜಾನ್‌ ಕಚೇರಿಗೆ ಹೋಗಿ ಮತ್ತೆ‌ ವಿಯಕುಮಾರಗೆ ಮನಬಂದಂತೆ‌ ಹೊಡೆದಿದ್ದಾರೆ. ಅಷ್ಟೇ ಅಲ್ಲದೆ ಕಚೇರಿಯಲ್ಲಿದ್ದ‌ ಇನ್ನಿಬ್ಬರು‌ ಸಿಬ್ಬಂದಿಗಳಿಗೂ‌ ಹೊಡೆದು, ನಮ್ಮ ಹೆಸರು ಹೇಳಿದರೆ ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕೃತ್ಯ ಕಚೇರಿಯಲ್ಲಿ‌ನ ಸಿಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಂಧಿ ಗಂಜ್‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Click

https://newsnotout.com/2024/08/fir-on-protested-perents-kannada-news-school-students-issue/
https://newsnotout.com/2024/08/serial-ki-kannada-news-kkenya-42-womens-are-suspence-nomore-j/
https://newsnotout.com/2024/08/baby-bites-snake-kannada-news-and-doctor-reveals-fact/
https://newsnotout.com/2024/08/bantwal-netravathi-river-issue-kannada-news-body-found/
https://newsnotout.com/2024/08/hijra-case-boy-suspence-issue-at-bengaluru-kannada-news-police/
https://newsnotout.com/2024/08/cm-siddaramayya-muda-case-and-his-wife-wrote-a-latter-t/

Related posts

ಮಗನ ಸಾವಿನ ಸುದ್ದಿ ಕೇಳಿ ತಂದೆಗೆ ಹೃದಯಾಘಾತ..! ವೈದ್ಯರಾಗಿದ್ದ ತಂದೆ-ಮಗನ ದುರಂತ ಸಾವು..!

ಮಟಮಟ ಮಧ್ಯಾಹ್ನ ಗುಂಡಿನ ದಾಳಿ..! ಅನಾಥ ಸ್ಥಿತಿಯಲ್ಲಿ ಕಾರಿನ ಬಳಿ ಇಬ್ಬರ ಹೆಣ ಪತ್ತೆ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ , ಪಾಕಿಸ್ತಾನದ ಯುವಕರು ಹೀಗೆ ಹೇಳಿದ್ಯಾಕೆ..?