ಕ್ರೈಂದೇಶ-ಪ್ರಪಂಚದೇಶ-ವಿದೇಶ

ಅಮೇರಿಕದ ಶಾಪ್‌ ನಲ್ಲಿ ಭಾರತೀಯ ವಿದ್ಯಾರ್ಥಿನಿಯರಿಂದ ಕಳ್ಳತನ..! ವಿಸಾದ ಮೇಲೆ ಮತ್ತಷ್ಟು ಕಠಿಣ ನಿಯಮಗಳ ಸಾಧ್ಯತೆ, ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ವಿದ್ಯಾರ್ಥಿನಿಯರಿಬ್ಬರು ನ್ಯೂಜೆರ್ಸಿಯ ಹೆಚ್‌ ಒನೊಕೆನ್‌ ನಲ್ಲಿ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಹೈದರಾಬಾದ್‌ ನ ಭವ್ಯ ಲಿಂಗನಗುಂಟಾ(20ವರ್ಷ)ಹಾಗೂ ಗುಂಟುರಿನ ಯಾಮಿನಿ ವಾಲ್ಕಲ್‌ ಪುಡಿ (22ವರ್ಷ) ಎಂದು ಗುರುತಿಸಲಾಗಿದೆ. ಇವರಿಬ್ಬರೂ ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಹೋದವರು ಎನ್ನಲಾಗಿದೆ.

ಹೊಬೊಕನ್‌ ನ ಶಾಪ್‌ ರಿಟ್‌ ನಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ. ಇಬ್ಬರು ವಿದ್ಯಾರ್ಥಿನಿಯರು ಎರಡು ವಸ್ತುಗಳನ್ನು ಖರೀದಿಸಿ ಹಣ ಪಾವತಿಸಿದ್ದರು, ಆದರೆ ಹೆಚ್ಚುವರಿಯಾಗಿ ಖರೀದಿಸಿದ್ದ 27 ವಸ್ತುಗಳ (155.61 ಡಾಲರ್)‌ ಹಣ ಪಾವತಿಸದೇ ತೆರಳಲು ಯತ್ನಿಸಿದ್ದರು ಎನ್ನಲಾಗಿದೆ. ಪ್ರಕರಣದ ಬಗ್ಗೆ ಸ್ಟೋರ್‌ ಮ್ಯಾನೇಜರ್‌ ಹೊಬೋಕನ್‌ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇಬ್ಬರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.‌

ವಿದ್ಯಾರ್ಥಿನಿಯೊಬ್ಬಳು ವಿಚಾರಣೆ ವೇಳೆ, ತನ್ನ ಖಾತೆಯಲ್ಲಿ ಲಿಮಿಟೆಡ್‌ ಬ್ಯಾಲೆನ್ಸ್‌ ಇದ್ದಿರುವುದಾಗಿ ತಿಳಿಸಿದ್ದು, ಮತ್ತೊಬ್ಬಳು ವಿದ್ಯಾರ್ಥಿನಿ ಕೆಲವು ವಸ್ತುಗಳ ಹಣ ಪಾವತಿಸಲು ಮರೆತುಬಿಟ್ಟಿರುವುದಾಗಿ ಹೇಳಿದ್ದಳು. ಬಳಿಕ ಇಬ್ಬರೂ ವಿದ್ಯಾರ್ಥಿನಿಯರು ದುಪ್ಪಟ್ಟು ಹಣ ನೀಡುವುದಾಗಿ ತಿಳಿಸಿ, ಇನ್ಮುಂದೆ ಇಂತಹ ಅಪರಾಧ ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಂಧನಕ್ಕೊಳಗಾದರೆ ತಮ್ಮ ಭವಿಷ್ಯದಲ್ಲಿನ ಉದ್ಯೋಗ ಮತ್ತು ವೀಸಾ ಪ್ರಕ್ರಿಯೆ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ಇಬ್ಬರು ವಿದ್ಯಾರ್ಥಿನಿಯರು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Related posts

ಸುಳ್ಯ: ಕೈಯಲ್ಲಿ ಕತ್ತಿ ಹಿಡಿದು ಹೋಟೆಲ್ ವ್ಯಾಪಾರಿಗೆ ಜಾತಿ ನಿಂದನೆ ಜೀವ ಬೆದರಿಕೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಹಾಕಾಳೇಶ್ವರನ ಭಸ್ಮ ಆರತಿ ವೇಳೆ ಭಾರೀ ಅಗ್ನಿ ಅವಘಡ..! ಹೋಳಿ ಸಂಭ್ರಮದಂದು 14 ಅರ್ಚಕರಿಗೆ ಹತ್ತಿಕೊಂಡ ಬೆಂಕಿ..!

ಬಸ್ – ಕಾರ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು