ಕ್ರೈಂದೇಶ-ವಿದೇಶರಾಜ್ಯ

ಲಾರಿಗೆ ಗುದ್ದಿದ ಶವ ಸಾಗಿಸುತ್ತಿದ್ದ ಅಂಬುಲೆನ್ಸ್..! ಮಹಿಳೆ ಸಾವು, ಇಬ್ಬರಿಗೆ ಗಂಭೀರ..!

ನ್ಯೂಸ್ ನಾಟೌಟ್: ಶವ ಸಾಗಿಸುತ್ತಿದ್ದ ಅಂಬುಲೆನ್ಸ್‌ ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಚಿತ್ರದುರ್ಗ ತಾಲೂಕಿನ ಬಳೆಕಟ್ಟೆ ಗ್ರಾಮದ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹಾವೇರಿಯ ಶಿವಬಸವ (50) ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆ ಖಾಸಗಿ ಅಂಬುಲೆನ್ಸ್‌ನಲ್ಲಿ ಶಿವಬಸವ ಎಂಬವರ ಮೃತದೇಹವನ್ನು ಹಾವೇರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಬಳೆಕಟ್ಟೆ ಬಳಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಅಂಬುಲೆನ್ಸ್‌ನಲ್ಲಿದ್ದ ಶಿವಬಸವ ಸಂಬಂಧಿ ಸರೋಜಮ್ಮ (52) ಸಾವನ್ನಪ್ಪಿದ್ದಾರೆ. ಅಲ್ಲದೇ ಅಂಬುಲೆನ್ಸ್‌ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/08/darshan-case-fir-kannada-news-viral-news-thugudeepa/

Related posts

ದರ್ಗಾದ ಮುಂದೆ ಗಣೇಶ ಮೆರವಣಿಗೆ ನಡೆಸಿದ್ದಕ್ಕೆ ಹಿಂಸಾಚಾರ..! 144 ಸೆಕ್ಷನ್‌ ಜಾರಿ, ಶಾಲಾ, ಕಾಲೇಜುಗಳಿಗೆ ರಜೆ..! ಆ ರಾತ್ರಿ ಅಲ್ಲಿ ನಡೆದದ್ದೇನು..?

ಬಂಟ್ವಾಳ: ಸಲಿಂಗ ಲೈಂಗಿಕ ಕಿರುಕುಳ ನೀಡಿದ್ದ ಮದ್ರಸಾ ಅಧ್ಯಾಪಕ! 53 ವರ್ಷ ಕಠಿಣ ಸಜೆ ಮತ್ತು ದಂಡ!

ತನ್ನದೇ ಸ್ಕೂಟರ್ ಗೆ ಬೆಂಕಿಕೊಟ್ಟು ಬಸ್ ಚಾಲಕ ಆತ್ಮಹತ್ಯೆ