ಸುಳ್ಯ

ಬೆಳ್ಳಾರೆ:ಏಳು ವರ್ಷದ ಬಾಲಕಿ ಮೇಲೆ ಯುವಕನಿಂದ ಅತ್ಯಾಚಾರ,ಪೋಕ್ಸೋ ಪ್ರಕರಣ ದಾಖಲು

ನ್ಯೂಸ್ ನಾಟೌಟ್ :ಏಳು ವರ್ಷದ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ನಡೆಸಿರುವ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಾಣಿಯೂರು ಎಂಬಲ್ಲಿಂದ ವರದಿಯಾಗಿದೆ.ಆರೋಪಿಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಾಗೇಶ(24) ಎಂದು ಗುರುತಿಸಲಾಗಿದೆ.

ಈತ ಮಹಾರಾಷ್ಟ್ರದ ಕೂಲಿ ಕಾರ್ಮಿರರೋರ್ವರ ಏಳು ವರ್ಷದ ಮಗಳು ಮೂತ್ರ ವಿಸರ್ಜನೆಗೆಂದು ತೆರಳಿದ್ದ ವೇಳೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ. ಘಟನೆಯಲ್ಲಿ ಬಾಲಕಿ ರಕ್ತಸ್ರಾವಗೊಂಡು ತೀವ್ರವಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ನೀಡಿದ್ದಾರೆ.

Related posts

ಅರಂತೋಡು: ಮತ್ತೊಂದು ಮರಳು ಸಾಗಾಟ ಲಾರಿ ವಶಕ್ಕೆ, ಸುಳ್ಯ ಪೊಲೀಸರ ಮಿಂಚಿನ ಕಾರ್ಯಾಚರಣೆ

ನಂದರಾಜ್ ಸಂಕೇಶ್ ರವರಿಗೆ ಮಹಾತ್ಮ ಜ್ಯೋತಿ ಬಾ ಪುಲೆ ಪ್ರಶಸ್ತಿ

ಕಡಬ: ಮತ್ತೆ ಕಾಣಿಸಿಕೊಂಡ ಆನೆಗಳ ಹಿಂಡು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಮುನ್ಸೂಚನೆ