ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಗಗನಸಖಿಯಂತೆ ಇನ್ಮುಂದೆ ಬಸ್ಸಲ್ಲೂ ಬರಲಿದ್ದಾಳೆ ಸಖಿಯರು..! ಏನಿದು ಸರ್ಕಾರದ ಹೊಸ ಯೋಜನೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಇನ್ನು ಮುಂದೆ ಬಸ್ಸಿನಲ್ಲಿಯೂ ಬಸ್‌ ಸಖಿ ಭಾಗ್ಯವನ್ನು ಸರ್ಕಾರ ಕಲ್ಪಿಸಿದ್ದು, ಇನ್ನು ಮುಂದೆ ಗಗನ ಸಖಿಯಂತೆ ಇವರೂ ಪ್ರಯಾಣಿಕರ ಸೇವೆಯಲ್ಲಿ ತೊಡಗಲಿದ್ದಾರೆ. ಈ ಬಸ್‌ ಸಖಿಯರ ಹೆಸರು ಶಿವನೇರಿ ಸುಂದರಿ ಎಂದು ಇಡಲಾಗಿದೆ. ಅಂದಹಾಗೆ, ಇದು ನಮ್ಮ ಕರ್ನಾಟಕದಲ್ಲಿ ಅಲ್ಲ.
ಶಿವನೇರಿ ಸುಂದರಿಯರನ್ನು ನೋಡಬೇಕು ಎಂದರೆ ನೀವು ಮಹಾರಾಷ್ಟ್ರಕ್ಕೆ ಹೋಗಬೇಕು.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಮುಂಬೈ ಮತ್ತು ಪುಣೆ ನಡುವೆ ಕಾರ್ಯನಿರ್ವಹಿಸುವ ಇ-ಶಿವನೇರಿ ಬಸ್‌ಗಳಲ್ಲಿ ಬಸ್ ಸಖಿಯರ ಸೇವೆಯನ್ನು ಆರಂಭಿಸುತ್ತಿದೆ. ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡಲು, ವಿಮಾನದಲ್ಲಿ ಹಾರಾಡುತ್ತಿರುವಂತೆಯೇ ಅನ್ನಿಸಬೇಕು ಎನ್ನುವ ಕಾರಣಕ್ಕೆ ಶಿವನೇರಿ ಸುಂದರಿ ಎಂಬ ಯೋಜನೆಯನ್ನು ಸಂಸ್ಥೆ ಪರಿಚಯಿಸುತ್ತಿದೆ. ಈ ಯೋಜನೆ ಅಡಿಯಲ್ಲಿ, ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಪ್ರತಿ ಬಸ್‌ನಲ್ಲಿ ತರಬೇತಿ ಪಡೆದ ಸಖಿಯರು ಇರುತ್ತಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, “ಮುಂಬೈ-ಪುಣೆ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವನೇರಿ ಬಸ್‌ಗಳು ಈಗ ‘ಶಿವನೇರಿ ಸುಂದರಿ’ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಮೂಲಕ ಪ್ರಯಾಣಿಕರಿಗೆ ಹೆಚ್ಚುವರಿ ಆತಿಥ್ಯ ಸೇವೆಗಳನ್ನು ಒದಗಿಸಲಾಗುತ್ತದೆ.

ಇದು ವಿಮಾನದೊಳಗಿನ ಸೇವೆಗಳ ಮಾದರಿಯೇ ಇರುತ್ತದೆ. ಪ್ರಯಾಣಿಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉತ್ತಮ ಗುಣಮಟ್ಟದ ಸಹಾಯವನ್ನು ಈ ಸಖಿಯರಿಂದ ಪಡೆಯಬಹುದು. MSRTC ಸಹ ನವೀನತೆಯನ್ನು ಪರಿಚಯಿಸಲು ಈ ಹೊಸ ಯೋಜನೆ ರೂಪಿಸಿದೆ. ಸೇವಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಭವಿಷ್ಯದಲ್ಲಿ ಮತ್ತಷ್ಟು ಇಂಥ ಯೋಜನೆ ರೂಪಿಸಲಾಗುವುದು ಎಂದಿದೆ.

Click

https://newsnotout.com/2024/10/radha-krishna-statue-kannada-news-god-theef-returns-the-statuee/
https://newsnotout.com/2024/10/mobile-adiction-kannada-news-mother-and-son-viral-cctv-video/
https://newsnotout.com/2024/10/father-love-on-son-and-bike-got-burned-kannada-news-viral-news/
https://newsnotout.com/2024/10/bandage-kannada-news-doctor-nomore-delhi-viral-news-minor/
https://newsnotout.com/2024/10/prof-bhagavan-and-chamundeshwari-kannada-news-kalladka-prbhakar-bhat/

Related posts

ISRO ವಿಜ್ಞಾನಿ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ಟ್ಯೂಷನ್ ಶಿಕ್ಷಕ ಈಗ ಪೊಲೀಸರ ಅತಿಥಿ

ಲುಲೂ ಮಾಲ್‌ನಲ್ಲಿ ಭಾರತ ಧ್ವಜಕ್ಕೆ ಅವಮಾನ..! ಮಾಲ್ ನಲ್ಲಿ ರಾರಾಜಿಸಿದ ಪಾಕ್ ಧ್ವಜ! ಏನಿದು ವಿವಾದ?

4 ಮಕ್ಕಳೊಂದಿಗೆ ಬಾವಿಗೆ ಹಾರಿದ ಆಕೆ! ಜೀವಭಯದಿಂದ ಹಗ್ಗ ಹಿಡಿದು ಮೇಲೆ ಬಂದ ತಾಯಿ!