ದೇಶ-ಪ್ರಪಂಚ

ಅಫ್ಘಾನ್ ವಾಯುಪಡೆಯ ವಿಮಾನವನ್ನು ಹೊಡೆದುರುಳಿಸಿದ ಉಜ್ಬೆಕಿಸ್ತಾನ್

ತಾಷ್ಕೆಂಟ್: ಉಜ್ಬೇಕ್ ವಾಯು ರಕ್ಷಣಾ ವ್ಯವಸ್ಥೆಯು ಅಫ್ಘಾನಿಸ್ತಾನದ ವಾಯುಪಡೆ ವಿಮಾನವನ್ನು ಹೊಡೆದುರುಳಿಸಿದೆ. ಅಫ್ಘಾನ್ ವಾಯುಪಡೆಯ ವಿಮಾನವು ಉಜ್ಬೆಕ್ ವಾಯುಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸುವ ಪ್ರಯತ್ನದಲ್ಲಿದ್ದಾಗ, ಉಜ್ಬೆಕ್ ವಾಯು ರಕ್ಷಣಾ ವ್ಯವಸ್ಥೆಯು ಆ ವಿಮಾನವನ್ನು ಉರುಳಿಸಿದೆ ಎಂದು ರಕ್ಷಣಾ ಸಚಿವಾಲಯವು ಸೋಮವಾರ ಮಾಹಿತಿ ನೀಡಿದೆ. ಆಗಸ್ಟ್ 15ರಂದು, ಸುರ್ಸೊಂಡಾರ್ಯೊ ಪ್ರದೇಶದ ಶೆರಾಬಾದ್ ಜಿಲ್ಲೆಯಲ್ಲಿ, ಅಫ್ಘಾನ್ ಸೇನಾ ವಿಮಾನ ಉಜ್ಬೇಕಿಸ್ತಾನದ ವಾಯುಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸುವ ಪ್ರಯತ್ನವನ್ನು ಉಜ್ಬೇಕ್ ವಾಯುಪಡೆಯ ವಾಯು ರಕ್ಷಣಾ ಪಡೆಗಳು ತಡೆದವು ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Related posts

ಅನಗತ್ಯ ಶಸ್ತ್ರಚಿಕಿತ್ಸೆಗಳಿಂದ ಜೀವಕ್ಕೆ ಆಪತ್ತು..! ಆಪರೇಷನ್ ಗೂ ಮುನ್ನ ಎಚ್ಚರ..! ಎಷ್ಟು ಜನರ ಜೀವ ತೆಗೆದಿದೆ ಅನಗತ್ಯ ‘ಆಪರೇಷನ್’..? ಏನಂತಾರೆ ವೈದ್ಯರು..? ಇಲ್ಲಿದೆ ಅಂಕಣ

ಇನ್ಮುಂದೆ ಯಾವುದೇ ರಾಜ್ಯದ, ಯಾವುದೇ ಬ್ಯಾಂಕ್‌ ನಿಂದ ಪಿಂಚಣಿ ಪಡೆಯಬಹುದು..! ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ

ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಉಡುಪಿ ಪೇಜಾವರ ಶ್ರೀಗಳಿಗೆ ವಿಶೇಷ ಆಹ್ವಾನ, ಆಹ್ವಾನ ಇದ್ದರೂ ಹೋಗುವುದಿಲ್ಲ ಎಂದ ಮಮತಾ ಬ್ಯಾನರ್ಜಿ..!