ಸುಳ್ಯ: 75ನೇ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ರಾಮಣ್ಣಗೌಡ ಕೆದಂಬಾಡಿ ಕುಟುಂಬದವರಾದ ಕೃಷ್ಣಪ್ಪ ಗೌಡ ಕೆದಂಬಾಡಿ ಹಾಗೂ ನಿವೃತ್ತ ಯೋಧ ವೆಂಕಟ್ರಮಣ ಗೌಡ ದಮಯಂತಿ ದಂಪತಿಗಳನ್ನು ಸುಳ್ಯ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಸನ್ಮಾನಿಸಲಾಯಿತು ಸುಳ್ಯ ಮಂಡಲ ಸಮಿತಿಯ ಅಧ್ಯಕ್ಷರು. ಮಹಿಳಾ ಮೋರ್ಚಾ ಅಧ್ಯಕ್ಷರು, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರು, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಸಮಿತಿಯ ಸದಸ್ಯರು ಮಂಡಲ ಸಮಿತಿಯ ಸದಸ್ಯರು, ನಗರ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.