ಅಡ್ಕಾರು: ಊಟ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಹರಿದ ಕಾರು..! ಕೂಲಿ ಕೆಲಸ ಅರಸಿಕೊಂಡು ಬಂದವನ ದುರಂತ ಅಂತ್ಯ
ನ್ಯೂಸ್ ನಾಟೌಟ್ : ಅಡ್ಕಾರಿನಲ್ಲಿ ಕಾರೊಂದು ಮೂವರು ಕೂಲಿ ಕಾರ್ಮಿಕರ ಜೀವವನ್ನು ಬಲಿ ಪಡೆದ ದುರಂತ ನಡೆದ ಬೆನ್ನಲ್ಲೇ ಅಂತಹುದೇ ಮತ್ತೊಂದು ದುರ್ಘಟನೆ ಅದೇ ಸ್ಥಳದ ಸಮೀಪ ನಡೆದಿದೆ ಎಂದು ತಿಳಿದು ಬಂದಿದೆ. ಮತ್ತೋರ್ವ ಕೂಲಿ ಕಾರ್ಮಿಕನ ಜೀವನ ಅಂತ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಅಡ್ಕಾರಿನ ಬಳಿ ಪಾದಾಚಾರಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸ್ಕಾರ್ಫಿಯೋ ಗುದ್ದಿ ಪಾದಾಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಕೇರಳ ಮೂಲದ ಕಾರು ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಸಾವಿಗೀಡಾದವವರನ್ನು ಅಣ್ಣಪ್ಪ
ಧಾರವಾಡ ಎಂದು ಗುರುತಿಸಲಾಗಿದೆ. ಅವರಿಗೆ 40 ವರ್ಷ
ಎಂದು ತಿಳಿದು ಬಂದಿದೆ. ಹೋಟೆಲ್ ನಲ್ಲಿ ಊಟ ಮಾಡಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಪೊಲೀಸರು
ಸ್ಥಳಕ್ಕೆ ಆಗಮಿಸಿದ್ದಾರೆ. ಇಂದು ಅಪಘಾತ ನಡೆದಿದ್ದಅಣತಿ ದೂರದಲ್ಲಿ ನಾಲ್ಕೈದು ದಿನಗಳ ಹಿಂದೆ ಇದೇ ರೀತಿ
ಪಾದಾಚಾರಿ ಮೇಲೆ ಕಾರು ಹರಿದು ಮೂವರು ಸಾವಿಗೀಡಾಗಿದ್ದರು. ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದ.