ಕರಾವಳಿ

ಅಕ್ರಮ-ಸಕ್ರಮ ಸಮಿತಿ ಸಭೆ ಹಾಗೂ ಮಂಜೂರಾತಿ ಪತ್ರಗಳ ವಿತರಣೆ

ಕಡಬ: ಇಲ್ಲಿನ ತಾಲೂಕಿಗೆ ಸಂಬಂಧಪಟ್ಟ ಹಾಗೆ ಅಕ್ರಮ-ಸಕ್ರಮ ಸಮಿತಿ ಸಭೆಯನ್ನು ಸಚಿವ ಎಸ್ ಅಂಗಾರ ರವರ ಅಧ್ಯಕ್ಷತೆಯಲ್ಲಿ ಬುಧವಾರ ಪೆರಾಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಪಟ್ಟಂತೆ ವಿವಿಧ ಪಿಂಚಣಿ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಲಾಯಿತು. ಒಟ್ಟು 37 ಫಲಾನುಭವಿಗಳಿಗೆ ಪಿಂಚಣಿ ಯೋಜನೆಗಳ ಮಂಜೂರಾತಿ ಪತ್ರ, ಕಡಬ ತಾಲೂಕಿ 21 ಫಲಾನುಭವಿಗಳಿಗೆ ಈ ಹಿಂದಿನ ಅಕ್ರಮ ಸಕ್ರಮ ಬೈಠಕ್ ನಲ್ಲಿ ಮಂಜೂರಾದ ಸಾಗುವಳಿ ಚೀಟಿಗಳನ್ನು ಸಚಿವರು ವಿತರಣೆ ಮಾಡಿದರು. ಇಂದಿನ ಅಕ್ರಮ ಸಕ್ರಮ ಬೈಠಕ್ ನಲ್ಲಿ ಕಡಬ ತಾಲೂಕಿಗೆ ಸಂಬಂಧಿಸಿದ ವಿವಿಧ ಗ್ರಾಮಗಳ ಒಟ್ಟು 125 ಕಡತಗಳನ್ನು ವಿಲೇವಾರಿ ಮಾಡಲಾಯಿತು.

Related posts

ಬಂಟ್ವಾಳ: ಟೆಂಪೋ ರಿಕ್ಷಾವನ್ನು ತಪ್ಪಿಸಲು ಹೋಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ಸರ್ಕಾರಿ ಬಸ್‌..!, ಬಸ್ಸಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶವಾಗಿ ಬಚವಾದದ್ದು ಹೇಗೆ..?

ಗುತ್ತಿಗಾರು: ಸಹಾಯ ನಿಧಿ ಕೂಪನ್ ವಿಜೇತರ ಫಲಿತಾಂಶ ಪ್ರಕಟ

ಸುಳ್ಯ: ಭೀಕರ ರಸ್ತೆ ಅಪಘಾತ;ಕಾರು-ಬೈಕ್ ಡಿಕ್ಕಿ,ಪಲ್ಟಿ ಹೊಡೆದ ಕಾರು..!ಮೂವರಿಗೆ ಗಂಭೀರ ಗಾಯ,ಮಾನವೀಯತೆ ಮೆರೆದ ಜನ..!