Uncategorized

ಮಂಗಳೂರು: ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಟಿ ಪ್ರಿಯಾಂಕ ದಿಢೀರ್‌ ಭೇಟಿ, ಪತಿ ಉಪೇಂದ್ರ ಸಂಕಷ್ಟ ದೂರ ಮಾಡುವಂತೆ ಕೊರಗಜ್ಜನಲ್ಲಿ ಪ್ರಾರ್ಥನೆ

ನ್ಯೂಸ್‌ ನಾಟೌಟ್‌: ಕರಾವಳಿಯ ಕಾರಣಿಕ ಕ್ಷೇತ್ರ ಕುತ್ತಾರಿನ ಸ್ವಾಮಿ ಕೊರಗಜ್ಜನ ಆದಿಕ್ಷೇತ್ರಕ್ಕೆ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ನಟ ಉಪೇಂದ್ರ ಅವರ ಪತ್ನಿ ನಟಿ ಪ್ರಿಯಾಂಕ ಅವರು ದಿಢೀರ್ ಆಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಕಾರಣಿಕದ ಸತ್ಯ ದೈವ ಸ್ವಾಮಿ ಕೊರಗಜ್ಜನಿಗೆ ಜಿಲ್ಲೆ ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಭಾರಿ ಸಂಖ್ಯೆಯ ಭಕ್ತರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಆದಿ ಕ್ಷೇತ್ರಗಳಿಗೆ ಖ್ಯಾತ ನಟರು, ನಟಿಯರು ಭೇಟಿ ನೀಡಿ ಇಷ್ಟಾರ್ಥ ನೆರವೇರಿಸುವಂತೆ ಹರಕೆಯನ್ನೂ ಹೊತ್ತು ತೆರಳುತ್ತಾರೆ. ಬಳಿಕ ತಮ್ಮ ಇಷ್ಟಾರ್ಥ ನೆರವೇರಿದ ತಕ್ಷಣ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸುತ್ತಾರೆ.

ನೂತನ ಸಿನೆಮಾ ಚಿತ್ರೀಕರಣಕ್ಕೆ ಬಂದಿದ್ದ ನಟಿ ಪ್ರಿಯಾಂಕ ಅವರು ಶುಕ್ರವಾರ ಮಧ್ಯಾಹ್ನ ಚಿತ್ರ ತಂಡದೊಂದಿಗೆ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ, ಆದಿ ಕೊರಗತನಿಯ ಸೇವಾ ಟ್ರಸ್ಟ್ ನ ಟ್ರಸ್ಟಿಗಳು ನಟಿ ಪ್ರಿಯಾಂಕರನ್ನು ಸನ್ಮಾನಿಸಿದರು.

ಇತ್ತೀಚೆಗೆ ನಟಿಯರಾದ ರಚಿತಾ ರಾಂ, ಮಾಲಾಶ್ರೀ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ತನ್ನ ಇಷ್ಟಾರ್ಥ ಈಡೇರಿದ್ದಕ್ಕಾಗಿ ಹರಕೆ ಸಲ್ಲಿಸಿದ್ದರು. ಇದೀಗ ನಟಿ ಪ್ರಿಯಾಂಕ ಉಪೇಂದ್ರ ಕೊರಗಜ್ಜನಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ನಟ ಉಪೇಂದ್ರ ಅವರು ಹೊಲಗೇರಿ ಹೇಳಿಕೆಯಿಂದಾಗಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಪೊಲೀಸ್ ಕೇಸನ್ನೂ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಪತ್ನಿ ಪ್ರಿಯಾಂಕ ಬಂದು ಸಂಕಷ್ಟ ದೂರ ಮಾಡುವಂತೆ ಕೊರಗಜ್ಜನಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ಗಮನ ಸೆಳೆದಿದೆ.

Related posts

ದೇಶಕ್ಕೆ ದೇಶವೇ ಹೆಮ್ಮೆ ಪಡಬೇಕು…ಸರಕಾರಿ ವೈದ್ಯರಾಗಿ ಇಬ್ಬರು ಮಂಗಳಮುಖಿಯರ ನೇಮಕ

ಹರೀಶ್‌ ಪೂಂಜ ಅಭಿಮಾನಿಗಳು ನಡೆಸಿದ ಕಬಡ್ಡಿ ಪಂದ್ಯಾಟದಲ್ಲಿ ಮಾರಾಮಾರಿ, ವಿಡಿಯೋ ವೈರಲ್ !!!

Rammandir:’ಮಸೀದಿ ಕೆಡವಿ ಮಂದಿರ ಕಟ್ಟಿದ್ದನ್ನ ಒಪ್ಪೋದಿಲ್ಲ’ ಉದಯನಿಧಿ ಸ್ಟ್ಯಾಲಿನ್‌ ಹೀಗೆ ಹೇಳಿದ್ಯಾಕೆ? ಈ ಹಿಂದೆಯೂ ಸನಾತನ ಧರ್ಮದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸ್ಟ್ಯಾಲಿನ್‌..