ಕ್ರೀಡೆ/ಸಿನಿಮಾ

ಲಾಲ್‌ಬಾಗ್‌ ನಲ್ಲಿ ಸ್ವಚ್ಚತಾ ಕಾರ್ಮಿಕನಿಗೆ ಗುದ್ದಿದ ರಚಿತಾರಾಮ್ ಕಾರು, ಮನೆಗೆ ಆಹ್ವಾನಿಸಿ ತಪ್ಪಾಯ್ತಣ್ಣ ಎಂದು ಕ್ಷಮೆ ಕೇಳಿದ ನಟಿ..!ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಲಾಲ್ ಬಾಗ್​​ನಲ್ಲಿ ಫ್ಲವರ್ ಶೋ ನಡೆಯುತ್ತಿದ್ದು, ಇದರಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕಾಗಿ ನಟಿ ರಚಿತಾರಾಮ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ.ಜಸ್ಟ್ ಮಿಸ್ ಎನ್ನುವಂತೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದರು.

ಪ್ರತಿವರ್ಷದಂತೆ ಈ ವರ್ಷವೂ ಕೂಡ ಸ್ವಾತಂತ್ರ್ಯೋತ್ಸವ ಪ್ರಯುಕ್ತ  ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಫ್ಲವರ್‌ ಶೋಗೆ ಸ್ಯಾಂಡಲ್​ವುಡ್​​ ನಟಿ ರಚಿತಾ ರಾಮ್ ಅತಿಥಿಯಾಗಿ ಆಗಮಿಸಿದ್ದರು. ಲಾಲ್‌ಬಾಗ್‌ಗೆ ಆಗಮಿಸುವ ವೇಳೆ ಸ್ವಚ್ಛತಾ ಕಾರ್ಮಿಕನಿಗೆ ರಚಿತಾ ರಾಮ್ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದಿಂದ ಸ್ವಚ್ಛತಾ ಕಾರ್ಮಿಕ ಪಾರಾಗಿದ್ದರು.ಕಾರು ತುಂಬಾ ನಿಧಾನದಲ್ಲಿ ಪ್ರಯಾಣಿಸುತ್ತಿದ್ದು ಸ್ವಚ್ಛತಾ ಕಾರ್ಮಿಕ ಕಾರನ್ನು ಗಮನಿಸದೇ ಇದ್ದ ಪರಿಣಾಮ ಈ ಘಟನೆ ನಡೆದಿತ್ತು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಕೂಡ ಆಗಿತ್ತು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನಟಿ ಹಾಗೂ ಕಾರ್​ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.ಆದರೂ ಈ ಕುರಿತಾಗಿ ನಟಿ ಇಂದು ಕ್ಷಮೆ ಕೇಳಿದ್ದಾರೆ.

https://www.instagram.com/reel/Cv9fpxgR1Pa/?igshid=MzRlODBiNWFlZA%3D%3D

ನಾನು ಲಾಲ್​ಬಾಗ್​ ಕಾರ್ಯಕ್ರಮಕ್ಕೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ನನ್ನ ಕಾರು ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ.ಇದಕ್ಕೆ ನಾನು ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಹಾಗೂ ನನ್ನ ಕಾರ್​ ಚಾಲಕನ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ.ಇದು ನಿನ್ನೆ ನನ್ನ ಗಮನಕ್ಕೆ ಬಂದಿರಲಿಲ್ಲ.ಇಲ್ಲವಾದ್ರೆ ನಿನ್ನೆಯೇ ನಾನು ಕ್ಷಮೆ ಕೇಳುತ್ತಿದ್ದೆ ಎಂದು ಹೇಳಿದ್ದಾರೆ.

ಈಗ ಸಿಬ್ಬಂದಿಯನ್ನು ಮನೆಗೆ ಕರೆದಿದ್ದೇನೆ. ಅವರು ಮನೆಗೆ ಬಂದಿದ್ದಾರೆ.ಇದೀಗ ಅವರ ಮುಂದೆ ಕುಳಿತು ಕ್ಷಮೆ ಯಾಚಿಸುತ್ತಿದ್ದೇನೆ ಎಂದಿದ್ದು, ಯಾವುದೇ ಕಾರ್ಮಿಕರಿಗೆ ಈ ಘಟನೆಯಿಂದ ನೋವಾಗಿದ್ದಲ್ಲಿ ನನ್ನನ್ನು ಕ್ಷಮಿಸಿ ಬಿಡಿ. ನನ್ನ ಕಾರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಇದು ಆಕಸ್ಮಿಕವಾಗಿ ನಡೆದ ಘಟನೆ ಆಗ ನನಗೆ ಗೊತ್ತಾಗಲಿಲ್ಲ ಎಂದಿದ್ದಾರೆ. ಸಿಬ್ಬಂದಿ ಬಳಿ ಕ್ಷಮೆ ಕೇಳಿದ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

Related posts

ವಿಶ್ವಕಪ್‌: ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ 14,000 ಟಿಕೆಟ್ ಬಿಡುಗಡೆ, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ ರೋಚಕ ಸೆಣಸಾಟ

ನ. 17 ಮತ್ತು 18 ರಂದು ಸುಳ್ಯದಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿ ಅದ್ಧೂರಿ ಪಂದ್ಯಾಟ, ರಾಷ್ಟ್ರಮಟ್ಟದ ಆಟಗಾರರ ಸಮಾಗಮ

ರಜನೀಕಾಂತ್​ ಮೊಮ್ಮಗನನ್ನು ಹುಡುಕಿಕೊಂಡು ಮನೆಗೆ ಬಂದದ್ದೇಕೆ ಪೊಲೀಸರು? ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದೇಕೆ?