Uncategorized

ಇಲ್ಲ..ಇಲ್ಲ ಅನ್ನುತ್ತಲೇ ಕೊಠಡಿಯಲ್ಲಿ ಸಿಕ್ಕಿಬಿದ್ದಳಲ್ಲ 2 ಮಕ್ಕಳ ತಾಯಿ..!

ನ್ಯೂಸ್ ನಾಟೌಟ್: ಅದ್ಯಾಕೋ ಏನೋ ಇತ್ತೀಚೆಗೆ ಮದುವೆಯ ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ ನೋಡಿ. ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ದಿಗ್ಗಜ ನಟ ಲೋಕೇಶ್ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಖ್ಯಾತ ನಟಿ ಪವಿತ್ರಾ ಲೋಕೇಶ್ ಗೆ ಎರಡು ಮಕ್ಕಳು ಭುಜದೆತ್ತರಕ್ಕೆ ಬೆಳೆದು ನಿಂತ ಮೇಲೆ ಗಂಡ ಬೇಡವಾಗಿದ್ದಾರೆ.

ಈ ಪವಿತ್ರಾಗೆ ಪರ ಪುರುಷನ ಜತೆಗಿನ ಡೇಟಿಂಗ್ ಮಾಡುವ ಮನಸ್ಸಾಗಿದೆ. ನಾನೇನು ತಪ್ಪು ಮಾಡಿಲ್ಲ. ನರೇಶ್ ನನಗೆ ಜಸ್ಟ್ ಫ್ರೆಂಡ್ ಅನ್ನುತ್ತಲೇ ಗೆಳೆಯ ನರೇಶ್ ಜತೆಗೆ ಒಂದು ರಾತ್ರಿ ಹೋಟೆಲ್ ವೊಂದರಲ್ಲಿ ಕಳೆದಿದ್ದಾರೆ. ಈಗ ನರೇಶ್ ಪತ್ನಿ ರಮ್ಯ ಅವರ ಕೈಗೆ ಇಬ್ಬರು ಕೂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಲ್ಲ ಕಣ್ರಿ..ಈ ಪವಿತ್ರಾ ಲೋಕೇಶ್ ಗೆ ಇದೆಲ್ಲ ಬೇಕಿತ್ತಾ..? ಸುಚೇಂದ್ರ ಪ್ರಸಾದ್ ರಂತಹ ಗಂಡ, ಮುದ್ದಾದ ಇಬ್ಬರು ಮಕ್ಕಳ ಜತೆಗೆ ಸುಖಮಯ ಜೀವನ ನಡೆಸಬೇಕಿದ್ದ ಪವಿತ್ರಾಗೆ ಇದ್ಯಾಕೆ ಇಂತಹ ಬುದ್ಧಿ ಬಂತು ಗೊತ್ತಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಅದರಲ್ಲೂ ಸೆಲೆಬ್ರಿಟಿಗಳು ನಾಲ್ಕು ಜನರಿಗೆ ಮಾದರಿಯಾಗಿರಬೇಕು ಹೊರತು ಈ ರೀತಿಯ ಹೊಲಸು ಕೆಲಸ ಮಾಡಬಾರದು. ಸದ್ಯ ಈ ಹೈಡ್ರಾಮಾ ಇನ್ನೆಲ್ಲಿ ಹೋಗಿ ನಿಲ್ಲುವುದೋ ಅನ್ನುವುದನ್ನು ಕಾದು ನೋಡಬೇಕಿದೆ.

Related posts

ನಟಿಯ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟನ ಬಂಧನ..! 3 ಗಂಟೆಗಳ ಕಾಲ ನಿರಂತರ ವಿಚಾರಣೆ..!

ನೀವೊಬ್ಬರೇ ಸಿಎಂ ಆಗಬೇಕಾ..? ಇದನ್ನೆಲ್ಲಾ ನೋಡಿಕೊಂಡು ಸಾಯಬೇಕಾ..? ಸಿದ್ದರಾಮಯ್ಯ ಮೇಲೆ ಪ್ರಣವಾನಂದ ಶ್ರೀ ವಾಗ್ದಾಳಿ

ಹಣದ ವಿಚಾರದಲ್ಲಿ ಸಹೋದರನ ಅಪಹರಣ,ಕೊಲೆ ಬೆದರಿಕೆ: ೧೦ ಲಕ್ಷ ನೀಡಬೇಕೆಂದು ಬೇಡಿಕೆ,ಓರ್ವ ಆಸ್ಪತ್ರೆಗೆ ದಾಖಲು