ಕೊಡಗು

ಫೆಬ್ರವರಿಯಲ್ಲಿ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಎಂಗೇಜ್‌ಮೆಂಟ್?

ನ್ಯೂಸ್ ನಾಟೌಟ್ : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈ ಹಿಂದೆ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಜತೆ ಎಂಗೇಜ್‌ಮೆಂಟ್‌ ಮಾಡಿಸಿಕೊಂಡಿದ್ದು,ಕಡೆಗೆ ಅವರಿಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.ಇದೀಗ ತೆಲುಗು,ತಮಿಳಿನ ನಟ ವಿಜಯ್ ದೇವರಕೊಂಡ (Vijay Devarakonda) ಜತೆ ಎಂಗೇಜ್‌ಮೆಂಟ್‌ ಆಗಲಿದ್ದಾರೆ ಎನ್ನುವ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡಿತಿವೆ.

ಇದೇ ಫೆಬ್ರವರಿಯಲ್ಲಿ ರಶ್ಮಿಕಾ ಹಾಗೂ ವಿಜಯ್ ಎಂಗೇಜ್‌ಮೆಂಟ್ (Engagement) ಮಾಡಿಕೊಳ್ತಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು,ವಿಜಯ್- ರಶ್ಮಿಕಾ ಜೋಡಿ ಆಪ್ತರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.ಆದರೆ ಇದುವರೆಗೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತಗೊಳಿಸಿಲ್ಲ.‘ಗೀತ ಗೋವಿಂದಂ’ ಜೋಡಿ ಡೇಟಿಂಗ್ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗಿದ್ದ ಈ ಜೋಡಿ ಇಬ್ಬರೂ ಜೊತೆಯಾಗಿರುವಾಗ ಸಾಕಷ್ಟು ಬಾರಿ ಪಾಪರಾಜಿಗಳ ಕಣ್ಣಿಗೆ ಒಟ್ಟಿಗೆ ತಗ್ಲಾಕೊಂಡಿದ್ದಾರೆ.

ಈಗ ಹರಿದಾಡುತ್ತಿರೋ ಹೊಸ ಸುದ್ದಿ ಏನಪ್ಪಾ ಅಂದರೆ, ಇದೇ ಫೆಬ್ರವರಿ ಎರಡನೇ ವಾರದಲ್ಲಿ ಇಬ್ಬರೂ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. ಅಷ್ಟಕ್ಕೂ ಈ ಸುದ್ದಿ ನಿಜನಾ? ಅಥವಾ ಗಾಸಿಪ್? ಇಬ್ಬರ ಕಡೆಯಿಂದ ಸ್ಪಷ್ಟನೆ ಸಿಗುವವರೆಗೂ ಕಾಯಬೇಕಿದೆ.

Related posts

ಮಡಿಕೇರಿ: ಬೆಳ್ಳಂ ಬೆಳಗ್ಗೆ ADC ಮನೆಗೆ ಲೋಕಾಯುಕ್ತ ಪೊಲೀಸರ ದಾಳಿ, ಮನೆಯಲ್ಲಿ ಪತ್ತೆಯಾಯ್ತು ಭಾರಿ ಪ್ರಮಾಣದ ನಗದು..?

ಕಾರು -ಬೈಕ್ ಮುಖಾಮುಖಿ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ತೋಟಕ್ಕೆ ಪಲ್ಟಿ..! 5 ಮಂದಿ ಆಸ್ಪತ್ರೆಗೆ ದಾಖಲು..!