ದೇಶ-ಪ್ರಪಂಚ

ನಟಿ ಮೇಲೆ ದೌರ್ಜನ್ಯ ಪ್ರಕರಣ: ನಟ ದಿಲೀಪ್‌ಗೆ ನಿರೀಕ್ಷಣಾ ಜಾಮೀನು

ಕೊಚ್ಚಿ: ನಟಿ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಗಳನ್ನು ಅಪಾಯಕ್ಕೆ ಸಿಲುಕಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಮತ್ತು ಆತನ ಸಹ ಆರೋಪಿಗಳಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದಿಲೀಪ್ ಅವರನ್ನು ಕಸ್ಟಡಿಯಲ್ಲಿ ಪ್ರಶ್ನಿಸಬೇಕು ಎಂಬ ಪ್ರಾಸಿಕ್ಯೂಷನ್ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ್ದು ನ್ಯಾಯಮೂರ್ತಿ ಪಿ. ಗೋಪಿನಾಥ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ದಿಲೀಪ್ ಅವರನ್ನು ಕಸ್ಟಡಿಯಲ್ಲಿ ಪ್ರಶ್ನಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Related posts

ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್‌ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದದ್ದೇಗೆ..! ಆತನ ತಂದೆ ಮಾಡಿದ ಆ ಒಂದು ತಪ್ಪೇನು?

ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಉಡುಪಿ ಪೇಜಾವರ ಶ್ರೀಗಳಿಗೆ ವಿಶೇಷ ಆಹ್ವಾನ, ಆಹ್ವಾನ ಇದ್ದರೂ ಹೋಗುವುದಿಲ್ಲ ಎಂದ ಮಮತಾ ಬ್ಯಾನರ್ಜಿ..!

ಕೈದಿಯ ಜೊತೆ ಮಹಾಕಾಳಿಯ ದರ್ಶನಕ್ಕೆ ತೆರಳಿದ ಪೊಲೀಸರು..! ಕೈದಿಯ ಕೈ ಹಿಡಿದ ಕಾಳಿ..! ಜನಜಂಗುಳಿಯಲ್ಲಿ ಕೊಲೆ ಆರೋಪಿ ಪರಾರಿ..!