ಕ್ರೈಂ

ಎರಡು ದಿನಗಳ ಹಿಂದೆ ಮದುವೆಯಾಗಿದ್ದ ಯುವಕ ರಸ್ತೆಅಪಘಾತದಲ್ಲಿ ಸಾವು..!

ನ್ಯೂಸ್‌ ನಾಟೌಟ್‌ : ಬೀದರ್‌ ನಗರದ ಹೊರವಲಯದ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕನೋರ್ವ ಮೃತಪಟ್ಟಿರುವ ಹೃದಯವಿದ್ರಾಹಕ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ಯುವಕನನ್ನು ಕಮಲನಗರ ತಾಲೂಕಿನ ಬಳತ್ (ಬಿ) ಗ್ರಾಮದ ಅರುಣ ಕಾಶಿನಾಥ ಪಡಸಾಲೆ (33) ಎಂದು ಗುರುತಿಸಲಾಗಿದೆ. ಕಳೆದ ಜೂ. 29ರಂದು ಮದುವೆಯಾಗಿದ್ದ ಅರುಣ, ತನ್ನ ಪತ್ನಿ ಗ್ರಾಮ ಹುಮನಾಬಾದ ತಾಲೂಕಿನ ಮುಗನೂರ್‌ನಿಂದ ನೌಬಾದ್‌ಗೆ ಬೈಕ್ ಮೇಲೆ ವಾಪಸ್ ಬರುವಾಗ ಸರ್ಕಾರಿ ಬಸ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಅರುಣ ಪಡಸಾಲೆ, ನೌಬಾದ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಈಗ ಮದುವೆಯಾದ ಎರಡು ದಿನದಲ್ಲೇ ದುರಂತ ಸಂಭವಿಸಿರುವುದು ಎರಡು ಕುಟುಂಬಗಳಿಗೆ ಆಘಾತವನ್ನುಂಟು ಮಾಡಿದೆ. ಸ್ಥಳಕ್ಕೆ ನೂತನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Related posts

ಸಿಎಂ ವಿರುದ್ಧದ ಮುಡಾ ಹಗರಣಕ್ಕೆ ಟ್ವಿಸ್ಟ್‌..! ದೂರು ಹಿಂಪಡೆಯಲು ದೂರುದಾರ ಸ್ನೇಹಮಯಿ ಕೃಷ್ಣಗೆ ಹಣದ ಆಮಿಷ ಆರೋಪ..?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆಪ್ತ ಹಾಸ್ಯ ನಟ ಚಿಕ್ಕಣ್ಣಗೂ ಪೊಲೀಸ್ ತನಿಖೆಯ ತೂಗುಗತ್ತಿ, ಚಿಕ್ಕಣ್ಣನಿಗೆ ದೊಡ್ಡಣ್ಣನ ನೋಟಿಸ್ ಏಕೆ..?

ಪ್ರಾಂಶುಪಾಲೆಯನ್ನು ಕಾಲೇಜು ಸಿಬ್ಬಂದಿಯೇ ಎಳೆದು ಹಾಕಿ ಗಲಾಟೆ ನಡೆಸಿದ್ದೇಕೆ..? ಇಲ್ಲಿದೆ ವೈರಲ್ ವಿಡಿಯೋ