ದೇಶ-ಪ್ರಪಂಚಫ್ಯಾಷನ್

ಬಿಕಿನಿ ಧರಿಸಿ ಸಾರ್ವಜನಿಕ ಬಸ್‌ ಏರಿದ ಮಹಿಳೆ, ಹೀಗೋ ಉಂಟೇ ಎಂದು ಬೆಚ್ಚಿ ಬಿದ್ದ ಪ್ರಯಾಣಿಕರು, ಇಲ್ಲಿದೆ ನೋಡಿ ವಿಡಿಯೊ

ನ್ಯೂಸ್ ನಾಟೌಟ್: ಸಾರ್ವಜನಿಕ ಬಸ್‌ ಏರಿದ ಮಹಿಳೆಯೊಬ್ಬಳು ಅಸಭ್ಯವಾಗಿ ವರ್ತಿಸಿದ್ದಾಳೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ. ಇದರ ಸವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಕಿನಿ ಧರಿಸಿದ್ದ ಈ ಮಹಿಳೆ ದೆಹಲಿಯ ಡಿಟಿಸಿ ಬಸ್‌ಗೆ ಏರಿ ಅಶ್ಲೀಲವಾಗಿ ವರ್ತಿಸಿದ್ದಾಳೆ. ಬಳಿಕ ಪುರುಷರತ್ತ ಅಸಭ್ಯವಾಗಿ ಸನ್ನೆ ಮಾಡಿದ್ದಾಳೆ. ಆಕೆಯ ವರ್ತನೆಯಿಂದ ಬೇಸತ್ತ ಪ್ರಯಾಣಿಕನೊಬ್ಬ ಕುಳಿತಿದ್ದ ಸೀಟಿನಿಂದಲೇ ಎದ್ದು ಆಚೆ ಬರುತ್ತಾನೆ. ಅಲ್ಲದೆ ಆಕೆಯ ಮೈ ಪೂರ್ತಿ ಒದ್ದೆಯಾಗಿರುವುದೂ ವಿಡಿಯೊದಲ್ಲಿ ಕಂಡು ಬಂದಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನ ʼದಿಲ್ಲಿ ಬಸ್‌ʼ ಎಂಬ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ದೆಹಲಿ ಸಾರಿಗೆ ಕಾರ್ಪೋರೇಷನ್‌ಗೆ ಸೇರಿದ ಬಸ್‌ನಲ್ಲಿ ಈ ಘಟನೆ ನಡೆದಿದೆ. ʼʼಮಹಿಳೆ ಬಸ್ ಏರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾಳೆ. ಅಲ್ಲದೇ ಇತರ ಪ್ರಯಾಣಿಕರ ಜತೆ ವಾದ ಮಾಡುತ್ತಾಳೆ. ಈಕೆಯ ವರ್ತನೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಅನೇಕರು ಈಕೆಯ ವರ್ತನೆಯಿಂದ ಕಿರಿಕಿರಿಗೊಳಗಾಗಿದ್ದರು. ಇಂತಹ ವರ್ತನೆಗೆ ಕಡಿವಾಣ ಹಾಕಲೇ ಬೇಕಿದೆʼʼ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ. ಈಗಾಗಲೇ 5 ಲಕ್ಷಕ್ಕಿಂತ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿ ಮಹಿಳೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related posts

ಚೀನಾದಲ್ಲಿ ಕೋವಿಡ್ ಉಲ್ಬಣ : ಗನ್ಸು ಪ್ರಾಂತ್ಯದ ಎಲ್ಲ ಪ್ರವಾಸಿ ತಾಣಗಳು ಬಂದ್

Rameshwaram Cafe: ರಾಮೇಶ್ವರಂ ಕೆಫೆಗೆ ಮತ್ತೊಂದು ಸಂಕಷ್ಟ,ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ..! ಅವಧಿ ಮೀರಿದ ಆಹಾರ ಪದಾರ್ಥಗಳು ವಶಕ್ಕೆ..!

16ರ ಯುವತಿಗೆ ಚೂರಿ ಇರಿದು – ಜುಟ್ಟು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ವ್ಯಕ್ತಿ ! ತನಿಖೆಯಲ್ಲಿ ಬಯಲಾಯ್ತು ರಹಸ್ಯ..!