ದೇಶ-ಪ್ರಪಂಚ

ಸ್ಕೂಟಿಗೆ ಡಿಕ್ಕಿ ಹೊಡೆದು 6 ವರ್ಷದ ಮಗುವನ್ನು 2 ಕಿ.ಮೀ ಎಳೆದೊಯ್ದ ಟ್ರಕ್

ನ್ಯೂಸ್ ನಾಟೌಟ್: ಮತ್ತೊಂದು ಆಘಾತಕಾರಿ ಹಿಟ್​​ ಆಂಡ್ ರನ್ ಪ್ರಕರಣದಲ್ಲಿ ಟ್ರಕ್‌ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದು 6 ವರ್ಷದ ಮಗುವನ್ನು 2 ಕಿ.ಮೀಗೂ ಅಧಿಕ ದೂರ ಎಳೆದೊಯ್ದಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಉತ್ತರ ಪ್ರದೇಶದ ಕಾನ್ಪುರ-ಸಾಗರ್ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದ ವೇಳೆ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಅಜ್ಜ ಉದಿತ್ ನಾರಾಯಣ ಚಾನ್ಸೋರಿಯಾ(67) ಹಾಗೂ ಮೊಮ್ಮಗ ಸಾತ್ವಿಕ್ ಮೃತಪಟ್ಟಿದ್ದಾರೆ.


ಟ್ರಕ್‌ ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಉದಿತ್‌ ನಾರಾಯಣ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮಗು ಸ್ಕೂಟಿ ಸಮೇತವಾಗಿ ಟ್ರಕ್‌ ಅಡಿಗೆ ಸಿಲುಕಿಕೊಂಡಿದೆ. ಚಾಲಕ ಸುಮಾರು ಎರಡು ಕಿ.ಮೀ ದೂರ ಟ್ರಕ್‌ ಚಾಲನೆ ಮಾಡಿಕೊಂಡು ಹೋಗಿದ್ದು, ಟ್ರಕ್‌ ಅಡಿಯಲ್ಲಿದ್ದ ಬಾಲಕನನ್ನು ಎಳೆದುಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇದನ್ನು ಗಮನಿಸಿದ ಹಲವು ಸವಾರರು ಟ್ರಕ್ ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ಚಾಲಕ ಯಾವುದನ್ನು ಲೆಕ್ಕಿಸದೇ ಟ್ರಕ್ ಓಡಿಸಿದ್ದಾನೆ. ಕೊನೆಗೆ ಸ್ಥಳೀಯರು ಟ್ರಕ್‌ ನಿಲ್ಲಿಸಲು ರಸ್ತೆಯ ಮೇಲೆ ಕಲ್ಲು ಮತ್ತು ಬಂಡೆಗಳನ್ನು ಇಟ್ಟಿದ್ದಾರೆ. ಟ್ರಕ್ ಅನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಸಾಮಾಜಿಕ ಜಾಲತಾಣದಲ್ಲಿ ಬ್ಲೂ ಟಿಕ್ ಮಾರ್ಕ್ ಕಳೆದುಕೊಂಡ ಪ್ರಜ್ವಲ್ ರೇವಣ್ಣ..! ಇಲ್ಲಿದೆ ಸಂಪೂರ್ಣ ಮಾಹಿತಿ

‘ಸೆಕ್ಸ್’‌ ನನ್ನ ಸಾಮರ್ಥ್ಯದ ಗುಟ್ಟು, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೀಗೆ ಹೇಳಿದ್ಯಾಕೆ..?

ಗೂಡ್ಸ್ ರೈಲುಗಳ ನಡುವೆ ಭೀಕರ ಅಪಘಾತ! ರೈಲಿನ ಇಂಜಿನ್‌ಗಳು ಬೆಂಕಿಗಾಹುತಿ, ಬೋಗಿಗಳು ಪಲ್ಟಿ!