Uncategorized

ಹೃದಯ ಸಮಸ್ಯೆಗೊಳಗಾದ ನವಜಾತ ಶಿಶು; ಹೆಚ್ಚಿನ ಚಿಕಿತ್ಸೆಗೆ ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ!

ನ್ಯೂಸ್ ನಾಟೌಟ್: ಆಗಷ್ಟೇ ತಾಯಿಯ ಹೊಟ್ಟೆಯಿಂದ ಹೊರಬಂದ ನವಜಾತ ಶಿಶು. ಹುಟ್ಟಿದ ಕೂಡಲೇ ಮಗುವಿಗೆ ಹೃದಯ ಸಂಬಂಧಿಸಿದ ಸಮಸ್ಯೆ ಇರುವುದರಿಂದ ವೈದ್ಯರು ತಕ್ಷಣವೇ ಶಸ್ತ್ರ ಚಿಕಿತ್ಸೆ ಆಗತ್ಯವಿದೆಯೆಂದು ತಿಳಿಸಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವ ಘಟನೆ ನಡೆದಿದೆ.

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿನಿ ಎಂಬವರು ಮಗುವಿಗೆ ಜನ್ಮ ನೀಡಿದ್ದರು. ಆದರೆ ಜನಿಸಿದಾಗಲೇ ಮಗುವಿಗೆ ಹೃದಯ ಸಮಸ್ಯೆ ಇರುವುದನ್ನು ಗಮನಿಸಿದ್ದರು. ಕೂಡಲೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ತಕ್ಷಣ ಶಸ್ತ್ರ ಚಿಕಿತ್ಸೆಗೆ ಅಗತ್ಯವಿರುವ ಕಾರಣ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದರು. ಮಗುವಿನ ಪೋಷಕರಿಗೆ ವಿಷಯ ತಿಳಿಸಿ ನಂತರ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಜೀರೋ ಟ್ರಾಫಿಕ್‌ ವ್ಯವಸ್ಥೆಗೆ ಮನವಿ ಮಾಡಿದರು. ಅದರಂತೆ ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಬೆಂಗಳೂರಿನ ಹೃದ್ರೋಗ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

Related posts

ಹೊಸ ಲೋಗೋದೊಂದಿಗೆ ಹೊಸ ಯೋಜನೆಗಳನ್ನು ಪರಿಚಯಿಸಿದ BSNL..​! ಬಿ.ಎಸ್.​ಎನ್.​ಎಲ್ ಫೈಬರ್ ಬ್ರಾಡ್‌ ಬ್ಯಾಂಡ್ ಗ್ರಾಹಕರಿಗೆ ಉಚಿತ ವೈಫೈ..!

ಬಂಟ್ವಾಳ : ಅಡಿಕೆ ಮರದ ಸಲಾಕೆಯಿಂದ ಹೊಡೆದು ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಿದ ಅಣ್ಣ

ಡಾ. ಟಿ. ಶ್ಯಾಮ್ ಭಟ್ ಗೆ ಒಲಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಪಟ್ಟ , ಇಲ್ಲಿದೆ ಸಂಪೂರ್ಣ ಮಾಹಿತಿ