ದೇಶ-ಪ್ರಪಂಚ

ವಿವಾಹಿತ ಮಹಿಳೆ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ನ್ಯೂಸ್ ನಾಟೌಟ್ : ನಿನ್ನೆ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ವಿವಾಹಿತ ಮಹಿಳೆಯೋರ್ವಳಿಗೆ ಅಪರಿಚಿತರ ಗುಂಡಿನ ದಾಳಿ ನಡೆಸಿದ್ದಾರೆ.ಪರಿಣಾಮ ಮಹಿಳೆ ಮೃತಪಟ್ಟಿದ್ದಾರೆ. ಮೃತರನ್ನು ಜ್ಯೋತಿ(32) ಎಂದು ಗುರುತಿಸಲಾಗಿದೆ.ದೆಹಲಿಯ ಪಶ್ಚಿಮ ವಿಹಾರದಲ್ಲಿ ಈ ಘಟನೆ ನಡೆದಿದೆ.

ಘಟನೆ ವಿವರ:

ಜ್ಯೋತಿ ಅವರು ಫ್ಲಿಪ್‌ಕಾರ್ಟ್‌ನ ಕೊರಿಯರ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ 7:30 ರ ವೇಳೆ ಕೆಲಸ ಮುಗಿಸಿ ಸ್ಕೂಟರ್‌ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಬೈಕ್‌ ಹಾಗೂ ಸ್ಕೂಟಿಯಲ್ಲಿ ಬಂದ ದುಷ್ಕರ್ಮಿಗಳು ಜ್ಯೋತಿ ಮೇಲೆ ಗುಂಡಿನ ದಾಳಿ  ನಡೆಸಿದ್ದಾರೆ.ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದು, ಸಿಸಿಟಿವಿ ದೃಶ್ಯಗಳನ್ನು ನೋಡಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Related posts

ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಬಂದಿದ್ದ ಮುಸ್ಲಿಂ ಮುಖಂಡರಿಗೆ ಬೆದರಿಕೆ..! ಆಲ್ ಇಂಡಿಯಾ ಇಮಾಮ್ ಸಂಘಟನೆಯಿಂದ ರಾಜಿನಾಮೆಗೆ ಒತ್ತಡ..!

ಮದುವೆಗೆ ಗಿಫ್ಟ್ ಸಿಕ್ಕಿದ ಹೋಮ್ ಥಿಯೇಟರ್ ಸ್ಫೋಟ ಪ್ರಕರಣ; ತನಿಖೆಯಲ್ಲಿ ಬಯಲಾಯ್ತು ಸ್ಪೊಟಕ ಸತ್ಯ

58 ವರ್ಷದ ಮಹಿಳೆಯ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ! ನಿಗೂಢ ಕಾರಣಕ್ಕಾಗಿ ಸೇಡು ತೀರಿಸಿಕೊಂಡನೇ ಬಾಲಕ ?