ಕರಾವಳಿಸುಳ್ಯ

ಸುಳ್ಯ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯದ ಜಟ್ಟಿಪಳ್ಳದಲ್ಲಿ ನಡೆದಿದೆ.ವಿಶ್ವನಾಥ ಭಂಡಾರಿ( 72 ವರ್ಷ)ಎಂಬುವವರು ಮೃತ ದುರ್ದೈವಿ. ಮನೆಯ ಜಗಲಿಯಲ್ಲಿ ಕಬ್ಬಿಣದ ರಾಡ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಲು ನೋವಿನಿಂದ ಬಳಲುತ್ತಿದ್ದರು:


ಇವರು ಕೆಲ ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದು ಮನೆಯಲ್ಲೇ ಇದ್ದರು.ಹೀಗಾಗಿ ಹೊರಗಡೆ ಹೋಗುವುದಕ್ಕೆ ಅಸಾಧ್ಯವಾಗುತ್ತಿತ್ತು ಎನ್ನಲಾಗಿದೆ.ಇಂದು ಪತ್ನಿ ಕಾರ್ಯಕ್ರಮ ನಿಮಿತ್ತ ಹೊರಗೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬರೇ ಇದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related posts

ಗೋಳಿತೊಟ್ಟು ದಲಿತ ಪಿಡಿಒ ಹಠಾತ್‌ ವರ್ಗಾವಣೆ ವಿಚಾರ: ಅಕ್ಟೋಬರ್‌ 11ರಂದು ಬೃಹತ್ ಪ್ರತಿಭಟನೆ

ಕರ್ನಾಟಕದ ಹಲವು ಆರ್.​ಟಿ.ಓ ಗಳ ಮೇಲೆ ಲೋಕಾಯುಕ್ತ ದಾಳಿ..! ಚೆಕ್ ಪೋಸ್ಟ್​​ ಸಿಬ್ಬಂದಿ ವಿರುದ್ಧ ಹಲವು ಭ್ರಷ್ಟಾಚಾರ ಆರೋಪ..!

ಬ್ಯಾನರ್ ಅಳವಡಿಸುವ ವೇಳೆ ದುರಂತ, ಓರ್ವ ಸಾವು, ಇಬ್ಬರು ಗಂಭೀರ