ಕರಾವಳಿ

ಗೋಳಿತೊಟ್ಟು ದಲಿತ ಪಿಡಿಒ ಹಠಾತ್‌ ವರ್ಗಾವಣೆ ವಿಚಾರ: ಅಕ್ಟೋಬರ್‌ 11ರಂದು ಬೃಹತ್ ಪ್ರತಿಭಟನೆ

902

ಗೋಳಿತೊಟ್ಟು: ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಲಿತ ವರ್ಗಕ್ಕೆ ಸೇರಿದ ದಕ್ಷ ಪಿಡಿಒ ಪಿ. ವೆಂಕಟೇಶ್ ಅವರನ್ನು ರಾಜಕೀಯ ಒತ್ತಡ ಹೇರಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ಊರಿನ ಹಾಗೂ ಪರವೂರಿನ ದಲಿತ ಸಂಘಟನೆಯ ಸಮಾನ ಮನಸ್ಕರು ನಿರ್ಧರಿಸಿದ್ದಾರೆ. ಅಕ್ಟೋಬರ್‌ 11ರಂದು ಸೋಮವಾರ ಬೆಳಗ್ಗೆ 10.30 ಕ್ಕೆ ಗೋಳಿತೊಟ್ಟು ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಪುತ್ತೂರು, ಕಡಬ ತಾಲೂಕು ಹಾಗೂ ಗೋಳಿತೊಟ್ಟು ಗ್ರಾಮಸ್ಥರು ಆಗಮಿಸಲಿದ್ದಾರೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನಿದು ಘಟನೆ?

ಗೋಳಿತೊಟ್ಟಿನಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಅವರನ್ನು ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕೆಲಸದಿಂದ ವರ್ಗಾವಣೆ ಮಾಡಲಾಗಿತ್ತು. ರಾಜಕೀಯ ಒತ್ತಡ ತಂದು ಕೆಲವು ಸ್ವಾರ್ಥಿಗಳು ಇಂತಹ ಕೃತ್ಯ ಎಸಗಿದ್ದಾರೆ ಎಂದು ಊರಿನವರು ಮಾತನಾಡಿಕೊಳ್ಳುತ್ತಿದ್ದರು. ಈ ಬಗ್ಗೆ ನ್ಯೂಸ್ ನಾಟೌಟ್ ಮೊದಲಾಗಿ ವರದಿ ಮಾಡಿತ್ತು. ದಲಿತ ಪಿಡಿಒ ತನ್ನ ಅಧಿಕಾರ ಅವಧಿಯಲ್ಲಿ ನೂರಾರು ಜನಪರ ಕೆಲಸ ಮಾಡಿ ಕಾರ್ಯ ಸ್ಥಳಕ್ಕೆ ಪ್ರಶಸ್ತಿ ತರುವ ಮೂಲಕ ಗೌರವ ತಂದಿದ್ದರು. ಉದ್ಯೋಗ ಖಾತರಿ ಯೋಜನೆಯನ್ನು ಹೆಚ್ಚು ಜನರಿಗೆ ಅಲ್ಪಾವಧಿಯಲ್ಲಿ ತಲುಪಿಸಿದ ಕೀರ್ತಿಯೂ ಅವರದ್ದಾಗಿತ್ತು. ಅಂತಹ ಪಿಡಿಒ ಅವರನ್ನು ಕೆಲವರು ತಮ್ಮ ಬೇಳೆ ಬೆಯಿಸಿಕೊಳ್ಳುವುದಕ್ಕೆ ವರ್ಗಾವಣೆ ಮಾಡಿದ್ದಾರೆ ಅನ್ನುವ ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯ ಕೇಳಿ ಬಂದಿದೆ.

See also  ಸುಳ್ಯ: ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ, ಪ್ರತಿಯೊಬ್ಬರೂ ರಕ್ತದಾನ ಮಾಡಿ: ಡಾ| ಕೆ.ವಿ. ರೇಣುಕಾ ಪ್ರಸಾದ್ ಕರೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget