ಸುಳ್ಯ

ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ, ಸಂಪಾಜೆಯಲ್ಲಿ ಹೊತ್ತಿ ಉರಿದ ಕೃಷಿ ಭೂಮಿ

ನ್ಯೂಸ್ ನಾಟೌಟ್: ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಸಂಪಾಜೆಯಿಂದ ವರದಿಯಾಗಿದೆ.ಟ್ರಾನ್ಸ್ ಫಾರ್ಮರ್ ನಲ್ಲಿನ ಬೆಂಕಿ ಕಿಡಿ ಬಿದ್ದು ಆ ಸ್ಥಳದಲ್ಲಿರುವ ಹುಲ್ಲುಗಳಿಗೆ ತಗಲಿತು ಎನ್ನಲಾಗಿದೆ.

ಸಂಪಾಜೆಯ ಹೈಸ್ಕೂಲ್ ಬಳಿ ಘಟನೆ ಸಂಭವಿಸಿದೆ.ನಂತರ ಕೃಷಿ ಭೂಮಿಯು ಹೊತ್ತಿ ಉರಿದಿದ್ದು ಹಾನಿ ಸಂಭವಿಸಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.ಚೆಸ್ಕಾಂಗೆ ಮಾಹಿತಿ ನೀಡಿದರು. ಬಳಿಕ ಚೆಸ್ಕಾಂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.ಈ ಮೂಲಕ ಆಗಬಹುದಾದ ದೊಡ್ಡ ದುರಂತವನ್ನು ತಪ್ಪಿಸಿದರು. ಸ್ಥಳೀಯರ ಸಮಯ ಪ್ರಜ್ಞೆ ಹಾಗೂ ಚೆಸ್ಕಾಂ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ.

Related posts

ಸುಳ್ಯ: ಕಲ್ಕಿ ಮೊಬೈಲ್‌ನಲ್ಲಿ ಲಕ್ಕಿ ಕೂಪನ್ ಡ್ರಾ, ಯಾರ ಪಾಲಾಯಿತು ವಾರದ ಸ್ಮಾರ್ಟ್‌ ಬಹುಮಾನ.?

ಕಸಾಪ ಸುಳ್ಯ ಕನ್ನಡ ರಾಜ್ಯೋತ್ಸವ- ಸಾಹಿತ್ಯ ಸಂಭ್ರಮ; ಅತ್ತ್ಯುತ್ತಮ ಶಾಲೆ ಪುರಸ್ಕಾರ ಪಡೆದ ಕೋಲ್ಚಾರು ಶಾಲೆಯ ಸಮಿತಿ ಸದಸ್ಯರಿಗೆ,ಶಿಕ್ಷಕರಿಗೆ ಗೌರವ

ಕಡಬ: ಕುಮಾರಧಾರ ನದಿಗೆ ವ್ಯಕ್ತಿ ಜಿಗಿದ ಶಂಕೆ, ಪೊಲೀಸರಿಂದ ಹುಡುಕಾಟ