ಕರಾವಳಿದೇಶ-ಪ್ರಪಂಚ

ಟೇಕಾಫ್‌ವಾಗುತ್ತಿದ್ದ ವಿಮಾನಕ್ಕೆ ಡಿಕ್ಕಿಯಾದ ಹಕ್ಕಿ..!

ನ್ಯೂಸ್‌ ನಾಟೌಟ್‌: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.

ಗುರುವಾರ ಬೆಳಗ್ಗೆ 8.30ಕ್ಕೆ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟ್ಯಾಕ್ಸಿ ವೇ ದಾಟಿ ರನ್‌ವೇನಲ್ಲಿ ಸಾಗುತ್ತಿತ್ತು. ಈ ವೇಳೆ ಏಕಾಏಕಿಯಾಗಿ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿಯಾಗಿದೆ. ತಕ್ಷಣ ಅಪಾಯದ ಸೂಚನೆ ಅರಿತು ಎಟಿಸಿಗೆ ಪೈಲಟ್ ಮಾಹಿತಿ ನೀಡಿದ್ದಾರೆ. ತಕ್ಷಣ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಿಮಾನ ವಾಪಸ್‌ ಬಂದಿದೆ. ಸದ್ಯ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ವಿಮಾನದ ತಪಾಸಣೆ ನಡೆಸಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಘಟನೆಯಿಂದ ಕೆಲ ಕಾಲ ಮಂಗಳೂರು ಏರ್‌ರ್ಪೋರ್ಟ್ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

Related posts

ಬಸ್‌ನಿಂದ ಪ್ರಯಾಣಿಕರ ಕೆಳಕ್ಕಿಳಿಸಿದ KSRTC ಕಂಡೆಕ್ಟರ್..!

‘ನ್ಯೂಸ್ ನಾಟೌಟ್’ ವರದಿ ಬೆನ್ನಲ್ಲೇ ತಾತ್ಕಾಲಿಕವಾಗಿ ಪುಟ್ ಪಾತ್ ಸರಿಪಡಿಸಿದ ಅಧಿಕಾರಿಗಳು..! ನಾಳೆಯೇ ಸ್ಲ್ಯಾಬ್ ಹಾಕಿ ಶಾಶ್ವತ ಪರಿಹಾರ ನೀಡುವ ಭರವಸೆ

ಇದು ಬರೋಬ್ಬರಿ 20 ಅಡಿಯ ಅತ್ಯಂತ ಉದ್ದವಾದ ಪೆನ್ ..!ಇಂಡಿಯಾ ಬುಕ್ ಆಫ್ ರೆಕಾರ್ಡ್‌ʼನಲ್ಲಿ ಸ್ಥಾನ ಪಡೆದ ಈ ಪೆನ್ನಿನ ವಿಶೇಷತೆಯೇನು ಗೊತ್ತಾ?