ಕರಾವಳಿ

‘ಅಣ್ಣ ಈ ವಿಳಾಸ ಎಲ್ಲಿ?’ ಎಂದವನ ಎತ್ತಾಕ್ಕೊಂಡು ಹೋದ ಪುತ್ತೂರು ಪೊಲೀಸರು

ನ್ಯೂಸ್ ನಾಟೌಟ್: ಪುತ್ತೂರಿನ ಕೆಯ್ಯೂರಿನಲ್ಲಿ ಆಂಧ್ರಪ್ರದೇಶ ನೋಂದಣಿ ಸಂಖ್ಯೆ ಹೊಂದಿದ ಕಾರೊಂದರಲ್ಲಿ ಅನುಮಾನಸ್ಪದವಾಗಿ ತಿರುಗಾಟ ನಡೆಸುತ್ತಿದ್ದ ಅನ್ಯಕೋಮಿನ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ಬೆಳಗ್ಗೆಯಿಂದ ಈತ ಸುಮ್ಮನೆ ಕಾರಿನಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗಾಟ ನಡೆಸುತ್ತಿದ್ದ ಎನ್ನಲಾಗಿದೆ. ಅನುಮಾನದ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದೆ. ಈತ ವಿಳಾಸ ಹುಡುಕಿಕೊಂಡು ತಿರುಗಾಟ ನಡೆಸುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸದ್ಯ ದಕ್ಷಿಣ ಕನ್ನಡ ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಅನುಮಾನಸ್ಪದ ನಡೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

Related posts

ಕಾಂತಾರ ಸಿನಿಮಾದ ಆರ್ ಎಕ್ಸ್‌ 100 ಬೈಕ್ ರಹಸ್ಯ ಏನು ಗೊತ್ತಾ?

ಅರೆರೇ…ಈ ಮಹಿಳೆಯ ನಾಲಿಗೆಯಲ್ಲಿ ಕೂದಲು..!, ಕೂದಲಿಗೆ ಕಾರಣವಾಗಿದ್ದು ಏನು?

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ..!ಬೈಕ್ ಸವಾರ ಬೆಳ್ತಂಗಡಿಯ ಪ್ರದೀಪ್‌ ಶೆಟ್ಟಿ ಮೃತ್ಯು