ಕರಾವಳಿ

ಪ್ರವೀಣ್ ನೆಟ್ಟಾರ್ ಹಂತಕನಿಗೆ SKSSF ನೀಡಿದ್ದ ಗೇಟ್ ಪಾಸ್..!

ನ್ಯೂಸ್ ನಾಟೌಟ್ : ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಿ ಪ್ರವೀಣ್ ನೆಟ್ಟಾರ್ ಹತ್ಯೆ ಮಾಡಿ ಇದೀಗ ಜೈಲು ಪಾಲಾಗಿರುವ ಮೂವರು ಹಂತಕರ ಪೈಕಿ ಬಶೀರ್ ಎಲಿಮಲೆ ಕೂಡ ಒಬ್ಬ. ಕೋಳಿಯನ್ನು ಕೊಚ್ಚಿ ಕೊಂದಂತೆ ಪ್ರಾಣ ತೆಗೆದು ಕಂಬಿ ಎಣಿಸುತ್ತಿರುವ ಬಶೀರ್ ನನ್ನು ಎಸ್‌ ಕೆಎಸ್‌ಎಸ್‌ಎಫ್ ಸಂಘಟನೆಯವರು ವರ್ಷದ ಹಿಂದೆ ಸಂಘದ ಸದಸ್ಯತ್ವದಿಂದ ಕಿತ್ತೆಸೆದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಖಾಯ ಎಂಬ ತುರ್ತು ಸೇವಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಕೆಎಸ್‌ಎಸ್‌ಎಫ್‌ ಸಂಘಟನೆಯ ಸುಳ್ಯ ವಲಯದ ಎಲಿಮಲೆ ಶಾಖೆಯಲ್ಲಿ 4 ವರ್ಷಗಳ ಹಿಂದೆ ಬಶೀರ್  ಸದಸ್ಯತ್ವ ಪಡೆದಿದ್ದ, ನಂತರ ತನ್ನ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಎಸ್‌ ಕೆಎಸ್‌ಎಸ್‌ಎಫ್ ಅನ್ನು ವಿರೋಧಿಸಿದ್ದ ಮತ್ತೊಂದು ಸಂಘಟನೆಯ ಪರ ನಿರಂತರವಾಗಿ ಸ್ಟೇಟಸ್ ಪೋಸ್ಟ್ ಮಾಡುತ್ತಿದ್ದ, ಇದರಿಂದ ಎಸ್‌ ಕೆಎಸ್‌ಎಸ್‌ಎಫ್ ನಾಯಕರು ಹಾಗೂ ಕಾರ್ಯಕರ್ತರು ಮುಜುಗರಕ್ಕೊಳಗಾಗುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಆತನನ್ನು ಸಂಘಟನೆಯಿಂದ ಹೊರಕ್ಕೆ ಹಾಕಲಾಗಿದೆ. ಡಿಸೆಂಬರ್‌ ನಲ್ಲಿ ಸಂಘಟನೆ ಮೂಲಕ ಆನ್‌ಲೈನ್ ನಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಈತ ಮನವಿ ಮಾಡಿದ್ದರೂ ಸಂಘಟನೆಗೆ ಸೇರುವುದಕ್ಕೆ ಅವಕಾಶ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.

Related posts

ಇಂಡೋನೇಷ್ಯಾದಲ್ಲಿ ತುಳು ಮಾತನಾಡಿದ ಡಾ. ಬ್ರೋ, ‘ಹಲೋ ಎಂಚ ಉಲ್ಲರ್, ಇಲ್ಲಿದೆ ವೈರಲ್ ವಿಡಿಯೋ

ಫೆ.11ಕ್ಕೆ ಪುತ್ತೂರಿಗೆ ಅಮಿತ್ ಶಾ ಆಗಮನ , ಹನುಮಗಿರಿ ಕ್ಷೇತ್ರದ ಅಮರ ಗಿರಿ ಮಂದಿರ ಲೋಕಾರ್ಪಣೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ್ದ ಖಡಕ್ ಆಫೀಸರ್ ಗೆ ವರ್ಗಾವಣೆ! , ಅಷ್ಟಕ್ಕೂ ಎಡಿಜಿಪಿ ವರ್ಗಾವಣೆಯಾಗಿದ್ದೇಕೆ?