ಕ್ರೈಂವೈರಲ್ ನ್ಯೂಸ್

ಒಂದೇ ಟ್ರ್ಯಾಕ್‌ ನಲ್ಲಿ ಬಂದ 2 ಟ್ರೈನ್ ಗಳು ಮುಖಾಮುಖಿ ಡಿಕ್ಕಿ..! ಟ್ರ್ಯಾಕ್‌ ನಿಂದ ಹೊರಗೆ ಎಸೆಯಲ್ಪಟ್ಟ ರೈಲಿನ ಎಂಜಿನ್..!

ನ್ಯೂಸ್ ನಾಟೌಟ್ : ಉತ್ತರ ಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿದೆ. ಫತೇಪುರ್ ಬಳಿ ಒಂದೇ ರೈಲ್ವೆ ಟ್ರ್ಯಾಕ್‌ ನಲ್ಲಿ ಎರಡು ಗೂಡ್ಸ್ ರೈಲು ಚಲಿಸಿದ್ದು, ಮುಖಾಮುಖಿ ಡಿಕ್ಕಿಯಾಗಿವೆ. ಘಟನಾ ಸ್ಥಳಕ್ಕೆ ಹಿರಿಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು(ಫೆ.04) ಬೆಳಗಿನ ಜಾವ 4 ಗಂಟೆ 30 ನಿಮಿಷಕ್ಕೆ ಫತೇಪುರ್ ಜಿಲ್ಲೆಯಲ್ಲಿ ಈ ರೈಲು ಅವಘಡ ಸಂಭವಿಸಿದೆ. ಫತೇಪುರ್‌ನ ಶುಜಾತ್ಪುರ್ ಮತ್ತು ರುಸಲಾಬಾದ್ ರೈಲು ನಿಲ್ದಾಣಗಳ ಮಧ್ಯೆ ಈ ಅನಾಹುತ ಸಂಭವಿಸಿದೆ. ಒಂದು ಗೂಡ್ಸ್ ರೈಲಿನ ಲೋಕೋ ಪೈಲಟ್‌ ರೆಡ್ ಸಿಗ್ನಲ್ ದಾಟಿ ಬಂದಿದ್ದು ಈ ಅಪಘಾತ ಕಾರಣ ಎಂದು ಶಂಕಿಸಲಾಗಿದೆ.

https://x.com/HansrajMeena/status/1886649960759750734?ref_src=twsrc%5Etfw%7Ctwcamp%5Etweetembed%7Ctwterm%5E1886649960759750734%7Ctwgr%5E357e89467a31399e7d434c5a95b45394ccae876f%7Ctwcon%5Es1_&ref_url=https%3A%2F%2Fnewsfirstlive.com%2F2-goods-train-head-on-accident-in-uttar-pradeshs-fatehpur%2F

ಸ್ಥಳೀಯ ಖಾಗ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಟ್ರ್ಯಾಕ್‌ ನ ಹೊರಗೆ ಬಿದ್ದಿರುವ ಗೂಡ್ಸ್ ರೈಲಿನ ಎಂಜಿನ್ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ರೈಲ್ವೆ ಅಧಿಕಾರಿಗಳ ಪ್ರಾಥಮಿಕ ಮಾಹಿತಿ ಪ್ರಕಾರ ಒಂದು ಗೂಡ್ಸ್ ರೈಲು ಟ್ರ್ಯಾಕ್‌ ಮೇಲೆ ನಿಂತಿದ್ದು, ಸಿಗ್ನಲ್‌ ಗಾಗಿ ಕಾಯುತ್ತಿತ್ತು. ಆ ಸಂದರ್ಭದಲ್ಲಿ ಮತ್ತೊಂದು ಗೂಡ್ಸ್ ರೈಲು ಅದೇ ಟ್ರ್ಯಾಕ್‌ ನಲ್ಲಿ ವೇಗವಾಗಿ ಬಂದಿದೆ. ನಿಂತಿದ್ದ ಗೂಡ್ಸ್ ರೈಲಿಗೆ ಮತ್ತೊಂದು ಗೂಡ್ಸ್ ರೈಲು ಗುದ್ದಿ ಈ ಅಪಘಾತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Click

ಕಳ್ಳನಿಗೆ ವಿಶೇಷ ಷರತ್ತಿನ ಮೇಲೆ ಜಾಮೀನು ಮಂಜೂರು..! 200 ಗಿಡ ನೆಟ್ಟು ಪೋಷಿಸಲು ಸೂಚನೆ

ಹಿಂದೂ ವಿದ್ಯಾರ್ಥಿ ಕೈಗೆ ಕಟ್ಟಿದ ದಾರವನ್ನು ಕತ್ತರಿಸಿದ ದಕ್ಷಿಣ ಆಫ್ರಿಕಾದ ಶಿಕ್ಷಕ..! ಹಿಂದೂ ಮಹಾಸಭಾ ಆಕ್ರೋಶ..!

ಗೋ ಹತ್ಯೆ ಮಾಡಿದ್ರೆ ಸರ್ಕಲ್‌ ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದ ಕಾಂಗ್ರೆಸ್ ಸಚಿವ..! ಮಂಕಾಳ ವೈದ್ಯ ಖಡಕ್ ಎಚ್ಚರಿಕೆ..!

ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ವಾಕಿಟಾಕಿ ಕಳವು..! ಪ್ರಕರಣ ದಾಖಲು

ನಾಪತ್ತೆಯಾದ 11 ಬಾಲಕಿಯರ ಜಾಡು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್..! ಅಂಕಿತ್ ಎಂದು ಹೆಸರು ಬದಲಿಸಿಕೊಂಡಿದ್ದ ಅಫ್ತಾಬ್ ಖಾನ್ ನ ರಹಸ್ಯ ಬಯಲು..!

ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ನೂತನ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ

Related posts

ಆತನಿಗೆ 102 ಮಕ್ಕಳು, 12 ಹೆಂಡತಿರು! ಆತನ ಮಕ್ಕಳ ಹೆಸರೂ ನೆನಪಿಲ್ಲವಂತೆ! ಖರ್ಚು ನಿಭಾಯಿಸಲಾಗದೆ ಪತ್ನಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಿದ ವ್ಯಕ್ತಿ!

ಆಫೀಸ್‌ ನಲ್ಲಿ ಟಾರ್ಚರ್‌ ಕೊಟ್ಟ ಎಂದು ಮೇಲಾಧಿಕಾರಿಗೆ ಹೊಡೆಸಿದ ಸಿಬ್ಬಂದಿ..! ಸುಪಾರಿ ಕೊಟ್ಟು ನಡು ರಸ್ತೆಯಲ್ಲೇ ಹಲ್ಲೆ..!

ರೋಗಿಗಳ ಸೇವೆ ಮಾಡುತ್ತಲೇ ಪ್ರಾಣ ಬಿಟ್ಟ ನರ್ಸ್..!