ಕ್ರೈಂಬೆಂಗಳೂರುವೈರಲ್ ನ್ಯೂಸ್

ನಾಪತ್ತೆಯಾದ 11 ಬಾಲಕಿಯರ ಜಾಡು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್..! ಅಂಕಿತ್ ಎಂದು ಹೆಸರು ಬದಲಿಸಿಕೊಂಡಿದ್ದ ಅಫ್ತಾಬ್ ಖಾನ್ ನ ರಹಸ್ಯ ಬಯಲು..!

171
Spread the love

ನ್ಯೂಸ್ ನಾಟೌಟ್ : ಅಮಾಯಕ ಅಪ್ರಾಪ್ತ ಬಾಲಕಿಯರನ್ನು ಮೋಸದ ಬಲೆಗೆ ಬೀಳಿಸಿ ಅವರನ್ನು ಮದುವೆಯಾಗುವುದಾಗಿ ನಂಬಿಸುತ್ತಿದ್ದ ಈ ಅಂಕಿತ್ ಎಂಬ ಆರೋಪಿ, ಈತನ ಐಷಾರಾಮಿ ಜೀವನವನ್ನು ನೋಡಿದ ಆ ಹೆಣ್ಣುಮಕ್ಕಳೂ ಬಲೆಗೆ ಬೀಳುತ್ತಿದ್ದರು.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವೇಶ್ಯಾವಾಟಿಕೆ ದಂಧೆಯ ಜಾಡು ಹಿಡಿದು ಹೋದ ಪೊಲೀಸರ ಕೈಗೆ ಸಿಕ್ಕಿದ್ದು ಈ ‘ಅಂಕಿತ್​ ತಿವಾರಿ’ ಹಾಗೂ ಈತನ ಪ್ರೇಯಸಿ ‘ಕತ್ರೀನಾ’. ಇವರ ಹಿನ್ನೆಲೆ ಕೆದಕಿದಾಗ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ತಿಳಿದುಬಂದಿತ್ತು. ಈತನ ಹೆಸರು ಅಂಕಿತ್​ ಅಲ್ಲ ಬದಲಿಗೆ ಅಫ್ತಾಬ್ ಖಾನ್​ ಎನ್ನುವುದು. ಈತನ ಪ್ರೇಯಸಿ ಕತ್ರೀನಾ ಅಲ್ಲ ಬದಲಿಗೆ ಜುಬೀದಾ ಎನ್ನುವುದು ತಿಳಿದುಬಂದಿದೆ.

ಹಲವಾರು ಬಾಲಕಿಯರನ್ನು ಮದುವೆಯ ಹೆಸರಿನಲ್ಲಿ ಈತ ವಂಚಿಸುತ್ತಿದ್ದ. ತಾನು ಅಂಕಿತ್​, ಹನುಮ ಭಕ್ತ ಎಂದು ಹೇಳಿಕೊಂಡು ಅಮಾಯಕ ಬಾಲಕಿಯರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದ. ಅವರನ್ನು ಕರೆದುಕೊಂಡು ಬಂದು ಕೊನೆಗೆ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ವಿಷಯ ತಿಳಿದ ಪೊಲೀಸರು, ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ 11 ಬಾಲಕಿಯರನ್ನು ವೇಶ್ಯಾಗೃಹದಿಂದ ರಕ್ಷಣೆ ಮಾಡಲಾಗಿದೆ. 

ಪೊಲೀಸರ ಪ್ರಕಾರ, ಪೂರ್ಣಿಯಾ ಜಿಲ್ಲೆಯಲ್ಲಿ ಅಫ್ತಾಬ್ ಖಾನ್ ನೇತೃತ್ವದ ಮುಸ್ಲಿಮರ ಗುಂಪೊಂದು ಹಿಂದೂ ಹುಡುಗಿಯರನ್ನು ಲೈಂಗಿಕ ದಂಧೆಗೆ ಸಿಲುಕಿಸುವ ಕಾರ್ಯದಲ್ಲಿ ತೊಡಗಿದೆ ಎನ್ನಲಾಗಿದೆ. ಜನವರಿ 30ರಂದು ಪೂರ್ಣಿಯಾದ ಕಥಿಯಾರ್ ಮೋರ್ ಪ್ರದೇಶದಲ್ಲಿ ದಾಳಿ ನಡೆಸಿದಾಗ ವಿಷಯ ತಿಳಿದೆ. 11 ಮಂದಿ ಅಪ್ರಾಪ್ತ ವಯಸ್ಕರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿರುವ ವಿಷಯ ಬೆಳಕಿಗೆ ಬಂದಿದೆ. ಇನ್ನೂ ಎಷ್ಟು ಮಂದಿಯನ್ನು ಎಲ್ಲಿಗೆ ಈ ಗುಂಪು ಮಾರಾಟ ಮಾಡಿದೆ ಎನ್ನುವುದನ್ನು ಇನ್ನಷ್ಟೇ ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 32 ಜನರನ್ನು ಬಂಧಿಸಿದ್ದಾರೆ. ಅವನ ಸಹಾಯಕರಲ್ಲಿ ಮೊಹಮ್ಮದ್ ಶಕೀಬ್, ಮೌಸಮ್ ಖಾನ್, ಗುಡ್ಡು ಖಾನ್ ಮತ್ತು ಜುಬೇದಾ ಸೇರಿದ್ದಾರೆ. ಶಕೀಬ್ ಮತ್ತು ಮೌಸಮ್ ‘ರಾಜೀವ್ ಶಾ’ ಮತ್ತು ‘ರಿಷಭ್ ಶಾ’ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡಿದ್ದರೆ, ಜುಬೀದಾ ‘ಕತ್ರಿನಾ’ ಎಂಬ ಹೆಸರು ಇಟ್ಟುಕೊಂಡಿದ್ದಳು. ಬಾಲಕಿಯರನ್ನು ಬಾಲಾಪರಾಧಿಗಳ ಸುಧಾರಣಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.

Click

ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ವಾಕಿಟಾಕಿ ಕಳವು..! ಪ್ರಕರಣ ದಾಖಲು

See also  ಬೆಳ್ತಂಗಡಿ : ರಸ್ತೆ ಬದಿ ಐದು ಗ್ರನೇಡ್ ಪತ್ತೆ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು..!
  Ad Widget   Ad Widget   Ad Widget   Ad Widget   Ad Widget   Ad Widget