ಕ್ರೈಂ

ರೋಗಿಗಳ ಸೇವೆ ಮಾಡುತ್ತಲೇ ಪ್ರಾಣ ಬಿಟ್ಟ ನರ್ಸ್..!

354
Spread the love

ಚಿಕ್ಕಮಗಳೂರು: ಸಾವಿನ ಬಳಿಕ ನರ್ಸ್ ವೊಬ್ಬರು ತಮ್ಮ ಅಂಗಾಂಗವನ್ನು ಐವರಿಗೆ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಗಾನವಿ ಎಂಬ ಯುವತಿ ಶಿವಮೊಗ್ಗದ ನರ್ಸಿಂಗ್ ಹೋಮ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 8ರಂದು 3.30ರ ವೇಳೆಗೆ ದಿಢೀರ್ ಕುಸಿದು ಬೀಳುತ್ತಾರೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಆಕೆಯ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದರು. ಇದನ್ನು ತಿಳಿದ ಬಳಿಕ ಕುಟುಂಬದವರು ಆಕೆಯ ಅಂಗಾಂಗ ದಾನ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡರು.

See also  ಕಾರ್ಕಳ: ಲವ್ವರ್ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ..! 25 ದಿನಗಳಿಂದ ಜ್ವರ, ವಾಂತಿಯಿಂದ ಬಳಲಿ ಪತಿ ಸಾವು..!
  Ad Widget   Ad Widget   Ad Widget   Ad Widget   Ad Widget   Ad Widget