ವೈರಲ್ ನ್ಯೂಸ್ಸುಳ್ಯ

ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ಗೆ ನೆಹರೂ ಮೆಮೋರಿಯಲ್ ಕಾಲೇಜಿನ 3 ಎನ್.ಸಿ.ಸಿ (NCC)ಕೆಡೆಟ್ ಗಳು ಆಯ್ಕೆ, ಕಾಲೇಜಿನ ಇತಿಹಾಸದಲ್ಲೇ ಅಗ್ರಮಾನ್ಯ ಸಾಧನೆ

ನ್ಯೂಸ್ ನಾಟೌಟ್: 2025 ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ಗೆ ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೋರಿಯಲ್ ಕಾಲೇಜಿನ ಮೂವರು NCC ಕೆಡೆಟ್ ಗಳು ಆಯ್ಕೆಯಾಗಿದ್ದಾರೆ.

ಇದು ಕಾಲೇಜಿನ ಇತಿಹಾಸದಲ್ಲೇ ಅಗ್ರಮಾನ್ಯ ಸಾಧನೆಯಾಗಿದೆ. ಅಂತಿಮ ಬಿ.ಎ ವಿಭಾಗದ ಸಿ.ಎಸ್.ಯು.ಒ(CSUO) ಚೇತನ್ ಕೆ ಕರ್ತವ್ಯಪಥ್ ಪೆರೇಡ್ ಗೆ ಅಯ್ಕೆಯಾಗಿರುತ್ತಾರೆ. ಅಂತಿಮ ಬಿ.ಕಾಂ ನ ಸಿ.ಯು.ಒ(CUO) ಕೃಷ್ಣ ಕೆ.ಎಲ್ ಪ್ರಧಾನ ಮಂತ್ರಿ ರ್ಯಾಲಿ ಮತ್ತು ಫ್ಲ್ಯಾಗ್ ಏರಿಯಾ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.

‘ದ್ವಿತೀಯ ಬಿ.ಸಿ.ಎ’ಯ ಎಸ್.ಜಿ.ಟಿ (SGT)ಚಲನಾ .ಟಿ ಕರ್ತವ್ಯಪಥ್ ಪೆರೇಡ್ ಗೆ ಆಯ್ಕೆಯಾಗಿದ್ದಾರೆ. ಇವರಿಗೆ ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳಾಗಿರುವ ಲೆಫ್ಟಿನೆಂಟ್ ಸೀತಾರಾಮ್.ಎಂ.ಡಿ ಮಾರ್ಗದರ್ಶನವನ್ನು ನೀಡಿದ್ದು, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Click

https://newsnotout.com/2025/01/thirupathi-temple-pddlingg-issue-rush-kannada-news-s/
https://newsnotout.com/2025/01/kannada-news-hair-fall-kannada-news-30-to-40-people-issue/
https://newsnotout.com/2025/01/sullia-mother-misbehaviour-with-doubter-kannada-news-d/
https://newsnotout.com/2025/01/kannada-news-january-alchohol-kannada-news/

Related posts

ಪಾಕ್‌ ಕ್ರಿಕೆಟಿಗನ ಮುಖದಿಂದ ರಕ್ತ ಸುರಿಯುತ್ತಿದ್ದದ್ದನ್ನು ನೋಡಿ ಕನ್ನಡಿಗ ಕೆ.ಎಲ್. ರಾಹುಲ್ ಮಾಡಿದ್ದೇನು..? ವೈರಲ್ ಆದ ವಿಡಿಯೋದಲ್ಲೇನಿದೆ..?

ಸುಳ್ಯ : ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ

ನೀವೂ ಬೀದಿನಾಯಿಗಳಿಗೆ ಊಟ ಹಾಕ್ತಿರಾ..? ಹಾಗಾದ್ರೆ ಇನ್ಮುಂದೆ ಈ ರೂಲ್ಸ್ ಗಳನ್ನು ಪಾಲಿಸೋದು ಖಡ್ಡಾಯ..!