ಕ್ರೈಂರಾಜ್ಯ

ಬ್ಯಾಗ್ ನಿಂದ ಮಹಿಳೆಯ ಚಿನ್ನಾಭರಣ ಕಳವು..! 80 ಪ್ರಯಾಣಿಕರಿದ್ದ ಬಸ್ ಅನ್ನು ನೇರವಾಗಿ ಪೊಲೀಸ್ ಠಾಣೆಗೆ ತಂದ ಚಾಲಕ..!

ನ್ಯೂಸ್ ನಾಟೌಟ್: ಬಸ್ ಪ್ರಯಾಣದ ವೇಳೆ ಮಹಿಳೆಯ ವ್ಯಾನಿಟಿ ಬ್ಯಾಗ್‌ ನಿಂದ ಆಭರಣ ಕಳ್ಳತನ ಮಾಡಿದ ಆರೋಪದ ಹಿನ್ನೆಲೆ ಸಾರಿಗೆ ಬಸ್‌ ನಲ್ಲಿ ಭಾರಿ ಹೈಡ್ರಾಮ ನಡೆದಿದೆ. 80 ಪ್ರಯಾಣಿಕರಿದ್ದ ಸಾರಿಗೆ ಬಸ್ ಅನ್ನು ಚಾಲಕ ಮತ್ತು ನಿರ್ವಾಹಕ ಪೊಲೀಸ್ ಠಾಣೆಗೆ ತಂದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು(ಡಿ.22) ನಡೆದಿದೆ.

ಕೊಪ್ಪಳ ಮೂಲದ ಅಂಬಮ್ಮ ಎನ್ನುವ ಮಹಿಳೆ ಹೊಸಪೇಟೆಯಿಂದ ಕೊಪ್ಪಳಕ್ಕೆ ಸಾರಿಗೆ ಬಸ್‌ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮುನಿರಾಬಾದ್‌ ನಲ್ಲಿ ತಮ್ಮ ವ್ಯಾನಿಟಿ ಬ್ಯಾಗ್ ಚೆಕ್ ಮಾಡಿಕೊಂಡಾಗ 9 ಗ್ರಾಂ ಬಂಗಾರ ಕಳ್ಳತನ ಆಗಿರೋದು ಗಮನಕ್ಕೆ ಬಂದಿದೆ.

‘ಕೂಡಲೇ ಬಸ್ ನಿಲ್ಲಿಸಿ’ ಎಂದು ಬಂಗಾರ ಕಳ್ಳತನವಾದ ಮಹಿಳೆ ಅಂಬಮ್ಮ ಹಾಗೂ ಮಗಳು ಕೂಗಾಡಿದ್ದಾರೆ. ಮಹಿಳೆ‌ ರಾದ್ಧಾಂತ ಹಿನ್ನೆಲೆ 80 ಜನ ಪ್ರಯಾಣಿಕರ ಸಮೇತ ಸಾರಿಗೆ ಬಸ್ ಅನ್ನು ಚಾಲಕ ಮತ್ತು ನಿರ್ವಾಹಕ ಹೊಸಪೇಟೆ ನಗರ ಠಾಣೆಗೆ ತಂದಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್‌ ಲಖನ್ ಮಸುಗುಪ್ಪಿ ನೇತೃತ್ವದಲ್ಲಿ ಬಸ್‌ ನಲ್ಲಿದ್ದ 80 ಜನ ಪ್ರಯಾಣಿಕರನ್ನ ಒಬ್ಬೊಬ್ಬರನ್ನಾಗಿ ಕೆಳಗಿಳಿಸಿ ತಪಾಸಣೆ ನಡೆಸಿದರೂ ಚಿನ್ನಾಭರಣ ಪತ್ತೆಯಾಗಿಲ್ಲ. ಘಟನೆ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2024/12/takeoff-airplane-airhostelss-viral-news/
https://newsnotout.com/2024/12/kasaragodu-kannada-news-5-shops-are-under-fire-hd/
https://newsnotout.com/2024/12/udupi-kannada-news-tourist-boat-sink-boat-rider-suspence/
https://newsnotout.com/2024/12/viratkohli-restorant-in-bengaluru-cricketer-bbmp-notice/
https://newsnotout.com/2024/12/ticjet-dog-kannada-news-betting-issue-police-arrested-d/
https://newsnotout.com/2024/12/baby-naming-issue-court-case-couple-happy-ending/

Related posts

ಗೂನಡ್ಕ: ಮುಚ್ಚಿದಷ್ಟು ಮತ್ತೆ..ಮತ್ತೆ ಜರಿಯುತ್ತಿರುವ ನಿಗೂಢ ಗುಂಡಿ, ಸ್ಥಳೀಯರಲ್ಲಿ ಮತ್ತೆ ಹೆಚ್ಚಿದ ಆತಂಕ..! ಪ್ರಾಚೀನ ಕಾಲದ ಸುರಂಗ ಇರುವುದು ನಿಜವೇ..?

“ಜೈ ಶ್ರೀರಾಮ್”‌ ಹೇಳದಕ್ಕೆ ಹಲ್ಲೆ ನಡೆಸಿದ ಅಪರಿಚಿತರು! ಗಡ್ಡ ಕತ್ತರಿಸಿ ವಿಕೃತಿ ಮೆರೆದ ಪುಂಡರು!

ದಕ್ಷಿಣ ಕನ್ನಡ: ವಿವಾದ ಸೃಷ್ಟಿಸಿದ ಶಿಕ್ಷಣ ಇಲಾಖೆ ಸುತ್ತೋಲೆ..! ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಹಬ್ಬಗಳಿಗೆ ಅಡಚಣೆ..?