ನ್ಯೂಸ್ ನಾಟೌಟ್: ಅಪರೂಪದಲ್ಲಿ ಅಪರೂಪ ಎಂಬ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಿಂದ ವರದಿಯಾಗಿದೆ.
ಕೆಎಸ್ ಆರ್ ಟಿಸಿ ಚಾಲಕನೊಬ್ಬ ಡಿಪೋ ನಿರ್ವಾಹಕನಿಗೆ ಕೊಲೆ ಬೆದರಿಕೆಯೊಡ್ಡಿ ಗಾಳಿಯಲ್ಲಿ ಗುಂಡು ಹಾರಿಸಿದ ಅಚ್ಚರಿಯ ಘಟನೆ ಇದಾಗಿದೆ. ಇದೀಗ ಗುಂಡು ಹಾರಿಸಿದ ಬಸ್ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ.
ಮಡಿಕೇರಿ – ಬಿರುನಾಣಿ ಬಸ್ ಚಾಲಕ ವೇಣುಗೋಪಾಲ್ ಎಂಬಾತ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ ನಡೆಸುತ್ತಿದ್ದ. ಇದನ್ನು ಬಸ್ ನಲ್ಲಿ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಸೋಷಿಯಲ್ ಮೀಡಿಯಾದಲ್ಲೂ ಈ ವಿಡಿಯೋ ಹರಿದಾಡಿದೆ. ಇದನ್ನು ಪ್ರಶ್ನಿಸಿದ್ದರಿಂದ ರೊಚ್ಚಿಗೆದ್ದ ಚಾಲಕ ಡಿಪೋ ನಿರ್ವಾಹಕ ರೂಪೇಶ್ ಜೊತೆ ಜಗಳಕ್ಕಿಳಿದಿದ್ದಾನೆ. ಜಗಳ ತಾರಕಕ್ಕೇರಿ ಒಂದು ಹಂತದಲ್ಲಿ ಈತ ಕೋವಿ ತಂದು ರೂಪೇಶ್ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಹಿನ್ನೆಲೆ ಮಡಿಕೇರಿ ನಗರ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್ ನನ್ನು ಬಂಧಿಸಿ ನ್ಯಾಯಾಲಯಕ್ಜೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. ಆರೋಪಿ ವೇಣುಗೋಪಾಲನನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ. ಆರೋಪಿ ಪರ ಕಪಿಲ್ ಕುಮಾರ್ ದುಗ್ಗಳ ವಾದ ಮಂಡಿಸಿದ್ದರು.