ನ್ಯೂಸ್ ನಾಟೌಟ್: ಮಾಜಿ ವಿದೇಶಾಂಗ ಸಚಿವ, ಪದ್ಮ ವಿಭೂಷಣ, ಕರ್ನಾಟಕದ ಮಾಜಿ ಸಿಎಂ ಎಸ್ಎಂ ಕೃಷ್ಣ ಮಂಗಳವಾರ(ಡಿ.10) ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ಸಂಜೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕಾಫಿ ಡೇ ಆವರಣದಲ್ಲಿ ನಡೆಯಲಿದೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಿಂದ ರಸ್ತೆ ಮಾರ್ಗವಾಗಿ ಎಸ್ಎಂ ಕೃಷ್ಣ ಅಂತಿಮ ಯಾತ್ರೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ, ಎಸ್ಎಂ ಕೃಷ್ಣ ಅವರ ವಿವಾಹದ ಆಮಂತ್ರಣ ಪತ್ರಿಕೆ ಈಗ ವೈರಲ್ ಆಗುತ್ತಿದೆ.
ಎಸ್ ಎಂ ಕೃಷ್ಣ 1966 ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಪ್ರೇಮರನ್ನು ವಿವಾಹವಾಗಿದ್ದರು. ಇವರಿಬ್ಬರ ವಿವಾಹ 1966 ರ ಏಪ್ರಿಲ್ 29 ರಂದು ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್ನಲ್ಲಿ ನೆರವೇರಿತ್ತು.
‘‘ಸೋಮನಹಳ್ಳಿ ಎಸ್ಸಿ ಮಲ್ಲಯ್ಯನವರ ಕುಟುಂಬ ಮತ್ತು ಬಂಧು ವರ್ಗದವರು ತಾ 29-4-1966 ನೇ ಶುಕ್ರವಾರ ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್ನಲ್ಲಿ ನಡೆಯುವ ಚಿರಂಜೀವಿ ಎಸ್ಎಂ ಕೃಷ್ಣ (ದಿವಂಗತ ಎಸ್ಸಿ ಮಲ್ಲಯ್ಯನವರ ಪುತ್ರ) ಹಾಗೂ ಸೌಭಾಗ್ಯವತಿ ಪ್ರೇಮ (ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಕೆಆರ್ ಚನ್ನಪ್ಪಗೌಡರ ಪುತ್ರಿ) ಇವರುಗಳ ವಿವಾಹಕ್ಕೆ ತಾವು ದಯಮಾಡಿಸಿ ವಧೂವರರನ್ನು ಆಶೀರ್ವದಿಸಬೇಕಾಗಿ ಆಹ್ವಾನಿಸುತ್ತಾರೆ’’ ಎಂದು ಲಗ್ನಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಸದ್ಯ ಎಸ್ಎಂ ಕೃಷ್ಣ ವಿವಾಹದ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Click