ದೇಶ-ವಿದೇಶವೈರಲ್ ನ್ಯೂಸ್

ಪಾಕಿಸ್ತಾನದಲ್ಲಿ ಮೊದಲ ಹಿಂದೂ ಪೊಲೀಸ್‌ ವರಿಷ್ಠಾಧಿಕಾರಿಯ ನೇಮಕ..! ರಾಜೇಂದರ್ ಮೇಘವಾರ್ ಎಂಬವರ ಸಾಧನೆಗೆ ಮೆಚ್ಚುಗೆ

ನ್ಯೂಸ್‌ ನಾಟೌಟ್‌: ಹಿಂದೂ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನೇಮಕಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾಡಿನ್ ಗ್ರಾಮಾಂತರ ಮತ್ತು ಹಿಂದುಳಿದ ಜಿಲ್ಲೆಯವರಾದ ರಾಜೇಂದರ್ ಮೇಘವಾರ್ ಪಾಕ್ ನ ಮೊದಲ ಹಿಂದೂ ಪೊಲೀಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಮುಸ್ಲಿಂ ರಾಷ್ಟ್ರದಲ್ಲಿ ಅಡೆತಡೆಗಳನ್ನು ಮುರಿದು, ಮೇಘವರ್ ಅವರನ್ನು ಪಾಕಿಸ್ತಾನದ ಪೊಲೀಸ್ ಸೇವೆ (ಪಿಎಸ್‌ಪಿ) ಅಡಿಯಲ್ಲಿ ಫೈಸಲಾಬಾದ್‌ ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‌ಪಿ) ನೇಮಿಸಲಾಗಿದೆ.

ಪಾಕಿಸ್ತಾನದ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ (CSS) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಇದು ಪಾಕ್ ನ ಉನ್ನತ ಮಟ್ಟದ ಆಡಳಿತ ಮತ್ತು ಸರ್ಕಾರಿ ಸ್ಥಾನಮಾನಗಳನ್ನು ಪಡೆಯುವ ಸ್ಪರ್ಧಾತ್ಮಕ ನಾಗರಿಕ ಸೇವಾ ಪರೀಕ್ಷೆಯಾಗಿದೆ. ಇದರಲ್ಲಿ ತೇರ್ಗಡೆ ಹೊಂದಿ ಪೊಲೀಸ್ ಅಧಿಕಾರಿಯಾಗಿದ್ದಾರೆ.

Click

https://newsnotout.com/2024/12/kannada-news-pet-dog-viral-video-kannada-news-video/
https://newsnotout.com/2024/12/marriage-issue-dubai-groom-and-bride-missing-kannada-news-d/
https://newsnotout.com/2024/12/mangaluru-ganja-district-jail-issue-suspence-viral-news-d/
https://newsnotout.com/2024/12/kannada-news-district-hospital-of-ballary-jameer-ahamad-khan/

Related posts

ಮಲಯಾಲಂ ಚಿತ್ರರಂಗವೇ ತಲ್ಲಣ..! ಪ್ರಮುಖ ನಟರ ವಿರುದ್ಧ17 ಲೈಂಗಿಕ ದೌರ್ಜನ್ಯ ದೂರುಗಳು ದಾಖಲು..!

ಪತಂಜಲಿಗೆ 1 ಕೋಟಿ ದಂಡ ಹಾಕಬೇಕಾಗುತ್ತೆ ಏಂದದ್ದೇಕೆ ಸುಪ್ರೀಂ..? ಸುಳ್ಳು ಜಾಹೀರಾತು ನೀಡಿದ್ರಾ ಯೋಗ ಗುರು ರಾಮ್‌ದೇವ್?

ಉಬರಡ್ಕ: ಚಲಿಸುತ್ತಿದ್ದ ಆಟೋ ರಿಕ್ಷಾಕ್ಕೆ ಹಠಾತ್ ಅಡ್ಡ ಬಂದ ಕಾಡು ಹಂದಿ, ರಿಕ್ಷಾ ಪಲ್ಟಿ, ದಂಪತಿಗೆ ಗಾಯ