ನ್ಯೂಸ್ ನಾಟೌಟ್: ಸ್ಕೂಟರ್ ಮತ್ತು ಟಿಪ್ಪರ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತಪಟ್ಟಿದ್ದಾರೆ.
ಅರ್ಯಾಪು ನೆಕ್ರಾಜೆ ನಿವಾಸಿ ಹಸೈನಾರ್ ಅವರ ಪುತ್ರ ಮಹಮ್ಮದ್ ಆಸೀರ್(17ವ) ಅವರು ಮೃತಪಟ್ಟ ಯುವಕ. ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಆಸೀರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.