ದೇಶ-ಪ್ರಪಂಚವೈರಲ್ ನ್ಯೂಸ್

ಅಂದು ಕಣ್ಣು ಕಾಣಿಸಲ್ಲವೆಂದು ಮಗುವನ್ನು ಕಸದ ತೊಟ್ಟಿಗೆ ಬಿಸಾಕಿದ್ದ ಪೋಷಕರು, ಇಂದು ಅದೇ ಹುಡುಗಿ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್ , ಸಿಎಂ ಕಚೇರಿಯಲ್ಲಿ ಉದ್ಯೋಗ

ನ್ಯೂಸ್ ನಾಟೌಟ್: ಯಾರ ಭವಿಷ್ಯ ಹೇಗಿರುತ್ತದೆ ಅನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅನಾಥ ದೃಷ್ಟಿಮಾಂದ್ಯ ಹುಡುಗಿಯೊಬ್ಬಳು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾಳೆ. ಹೆತ್ತವರು ಬೇಡ ಎಂದು 25 ವರ್ಷದ ಹಿಂದೆ ಮಗುವನ್ನು ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಕಸದ ತೊಟ್ಟಿಗೆ ಬಿಸಾಕಿದ್ದರು. ಪೋಷಕರಿಗಾಗಿ ಎಷ್ಟು ಹುಡುಕಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಮಗುವನ್ನು ಜಲಗಾಂವ್ ನ ರಿಮಾಂಡ್ ಹೋಮ್ ನಲ್ಲಿರಿಸಿ ಬಳಿಕ ಉತ್ತಮ ಸೌಲಭ್ಯವಿರುವ ಪರಾಟವಾಡ ಕಿವುಡ ಮತ್ತು ಅಂಧ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ಮಗುವಿಗೆ ಮಾಲಾ ಪಾಪಲ್ಕರ್ ಎಂದು ನಾಮಕರಣವನ್ನು ಮಾಡಲಾಗಿತ್ತು. ಈ ಮಗು ಇದೀಗ ಬೆಳೆದರು ಎರಡು ದಶಕದ ಬಳಿಕ ಇದೀಗ ಮಹಾರಾಷ್ಟ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಹಾರಾಷ್ಟ್ರದ ಸಚಿವಾಲಯದಲ್ಲಿ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗೆ ಆಯ್ಕೆಯಾಗಿರುವುದು ನಿಜಕ್ಕೂ ಸ್ಪೂರ್ತಿಯುತ ಬದುಕಿನ ಕಥೆಯಾಗಿದೆ. ಮಾಲಾಗೆ ಮಾರ್ಗದರ್ಶಕಿಯಾಗಿ ಪದ್ಮ ಪ್ರಶಸ್ತಿ ಪುರಸ್ಕೃತ ಶಂಕರ ಬಾಬಾ ಪಾಪಲ್ಕರ್ ಅವರು ಸರ್ನೇಮ್ ಅನ್ನು ನೀಡಿದರು, ಆಕೆಯ ಪ್ರತಿಭೆಯನ್ನು ಪೋಷಿಸಿದ್ದರು. ಈ ಸಾಧನೆಯಿಂದ ಹರ್ಷಗೊಂಡಿರುವ ಮಾಲಾ ಅವರು ‘ನನ್ನನ್ನು ರಕ್ಷಿಸಲು ದೇವರು ದೇವದೂತರನ್ನು ಕಳುಹಿಸಿದ್ದಾರೆ. ನಾನು ಇಂದು ಈ ಸ್ಥಿತಿಗೆ ತಲುಪಲು ನೆರವಾಗಿದ್ದಾರೆ. ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವುದು ನನ್ನ ಬಯಕೆ ಎಂದು ಕನಸನ್ನು ಕಾಣುತ್ತಿದ್ದಾರೆ.

Related posts

ಮಹಿಳೆಯರಿಗೆ ‘ಫ್ರೀ ಬಸ್’ ಬಳಿಕ ‘ಗೃಹಲಕ್ಷ್ಮೀ’ ಗ್ಯಾರಂಟಿ, ನಾಳೆಯಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು

ಹುಲಿ ಉಗುರು: ಜಗ್ಗೇಶ್‌ ಗೂ ಕಾದಿದೆಯಾ ಕಾನೂನು ಕಂಟಕ? ನವರಸ ನಾಯಕನ ಮನೆಗೂ ಇಂದು ಭೇಟಿ ನೀಡಲಿದ್ದಾರಾ ಅರಣ್ಯಾಧಿಕಾರಿಗಳು? ಇಲ್ಲಿದೆ ವೈರಲ್ ವಿಡಿಯೋ

ಮೂವರು ಸಾಧುಗಳನ್ನು ಥಳಿಸಿದ್ದೇಕೆ ಜನರು..? 12 ಮಂದಿ ಬಂಧನ..!