ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ 7 ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಪಾನಿಪುರಿ ಕೊಡಿಸ್ತೇನೆ ಎಂದು ಕರೆದೊಯ್ದವನು ಈ ಅಮಾನುಷ ಕೃತ್ಯ ಎಸಗಿದ್ದಾನೆ.
ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಮಗು ಗರುಡ ಮಾಲ್ ಪಕ್ಕದಲ್ಲಿ ಭಿಕ್ಷೆ ಬೇಡುತ್ತಿದ್ದವರಾಗಿದ್ದು, ತಾಯಿಗೆ ಮಾತು ಬಾರದು. ಮಗುವಿನಲ್ಲಿ ಆಗುತ್ತಿರುವ ರಕ್ತಸ್ರಾವ ಗಮನಿಸಿ ತಾಯಿ ಮತ್ತು ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ. ಮೂಕ ತಾಯಿಯ ಮಗುವನ್ನು ರೇಪ್ ಮಾಡಿದ 54ರ ವ್ಯಕ್ತಿ, ಪಾನಿಪುರಿ ಕೊಡಿಸುತ್ತೇನೆ ಎಂದು ಮಗುವನ್ನು ಕರೆದೊಯ್ದು ರಸ್ತೆಯ ಪಕ್ಕದಲ್ಲಿದ್ದ ಹಿಟಾಚಿ ಕೆಳಗೆ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ರೇಪ್ ಮಾಡಿದವನೂ ನಿರ್ವಸತಿ ವ್ಯಕ್ತಿ ಎಂದು ತಿಳಿದುಬಂದಿದೆ. ಮೆಗ್ರಾತ್ ರೋಡ್ ಮುಖ್ಯರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ತರಲಾಗಿದ್ದ ಹಿಟಾಚಿ ರಸ್ತೆ ಪಕ್ಕ ನಿಂತಿತ್ತು. ಸದ್ಯ ಮಗುವಿಗೆ ಮೆಡಿಕಲ್ ಚೆಕಪ್ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಅಶೋಕನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.