Uncategorized

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನ ಮತ್ತಷ್ಟು ಫೋಟೋಗಳು ಬಿಡುಗಡೆ..! ತೀವ್ರ ಹುಡುಕಾಟದಲ್ಲಿ ಎನ್ಐಎ ಅಧಿಕಾರಿಗಳು..!

ನ್ಯೂಸ್‌ ನಾಟೌಟ್‌: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತನ ಬೆನ್ನಿಗೆ ಬಿದ್ದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು, ಬಾಂಬರ್’ನ ಮತ್ತಷ್ಟು ಫೋಟೋಗಳನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ.

ಮಾರ್ಚ್ 3ರಂದು ಪ್ರಕರಣದ ತನಿಖೆ ವಹಿಸಿಕೊಂಡಿರುವ ಎನ್‌ಐಎ, ಶಂಕಿತ ಓಡಾಡಿರುವ ಕೆಲವು ಭಾಗಗಳ ಸಿಸಿಟಿವಿ ಕ್ಯಾಮೆರಾ ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಈಗ ಅವುಗಳಲ್ಲಿ ಬಹುತೇಕ ಸ್ಪಷ್ಟವಾಗಿ ಗೋಚರಿಸುವ ಶಂಕಿತನ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇರಿಸಿದ್ದವನು ಎಂದು ನಂಬಲಾದ ಶಂಕಿತನನ್ನು ಪತ್ತೆ ಮಾಡಲು ಸಹಾಯ ಮಾಡುವಂತೆ ಸಾರ್ವಜನಿಕರನ್ನು ಎನ್‌ಐಎ ಕೋರಿದೆ.ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಅಂದಾಜು ಒಂದು ಗಂಟೆ ಬಳಿಕ ಪ್ರಮುಖ ಶಂಕಿತ ಉಗ್ರ ಬಿಎಂಟಿಸಿ ಬಸ್ ಒಂದನ್ನು ಹತ್ತುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿತ್ತು. ಸ್ಫೋಟವು ಮಾರ್ಚ್ 1ರಂದು ಮಧ್ಯಾಹ್ನ 12.56ಕ್ಕೆ ಸಂಭವಿಸಿದ್ದರೆ, ಅದೇ ದಿನ ಮಧ್ಯಾಹ್ನ 2.03ಕ್ಕೆ ಆತ ಬಿಎಂಟಿಸಿ ಬಸ್ ಹತ್ತುವುದು ಕಾಣಿಸಿದೆ. ಟಿ- ಶರ್ಟ್, ಟೊಪ್ಪಿ, ಮುಖಕ್ಕೆ ಮಾಸ್ಕ್ ಧರಿಸಿದ್ದ ಶಂಕಿತ, ಕೆಫೆಯಲ್ಲಿ ಐಇಡಿ ತುಂಬಿಸಿದ್ದ ಬ್ಯಾಗ್ ಇರಿಸಿ ಹೋಗುವುದು ಸಹ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Related posts

ಬಿಜೆಪಿ ಫ್ಲೆಕ್ಸ್​ನಲ್ಲಿ ಸಂಸದೆ ಸುಮಲತಾ ಅಂಬರೀಶ್ ಫೋಟೋ,ರಾಜಕೀಯ ಚರ್ಚೆಗಳಿಗೆ ಕಾರಣವಾದ ಫ್ಲೆಕ್ಸ್

ಕಲ್ಲಡ್ಕ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು! ಕಾರಣ ನಿಗೂಢ!

ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ನೂತನ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ