ನಾಗಪಟ್ಟಣ: ಕಾರೊಂದು ಪಲ್ಟಿಯಾದ ಪರಿಣಾಮ ಅನ್ಯಕೋಮಿನ ಯುವಕ-ಯುವತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ. ಆಲೆಟ್ಟಿ ರಸ್ತೆಯಲ್ಲಿ ಕೇರಳದ ಬಂದಡ್ಕ ಕಡೆಯಿಂದ ಬಂದ ಬ್ಯಾಲೆನೊ ಕಾರು ಅತೀ ವೇಗದಿಂದ ಬಂದು ನಾಗಪಟ್ಟಣ ವಿಶ್ರಾಂತಿ ಗೃಹದ ಬಳಿಯ ತಿರುವಿನಲ್ಲಿ ಪಲ್ಟಿಯಾಗಿದೆ.
ಮಡಿಕೇರಿ ಮೂಲದ ಅನ್ಯಕೋಮಿನ ಯುವಕ ಮತ್ತು ಯುವತಿ ಕಾರಿನಲ್ಲಿದ್ದವರು. ಇವರಿಬ್ಬರು ಕೇರಳದ ಬಂದಡ್ಕ ಕಡೆಯಿಂದ ಕೋಲ್ಚಾರು ಮಾರ್ಗವಾಗಿ ಹಿಂತಿರುಗಿ ಬರುತ್ತಿದ್ದರು. ಕಾರಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಕಾರಿನಲ್ಲಿದ್ದ ಯುವಕ ಮತ್ತು ಯುವತಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.