ಕರಾವಳಿಸುಳ್ಯ

ಸುಬ್ರಹ್ಮಣ್ಯ: ನಿಯತ್ತಿಗೆ ಮತ್ತೊಂದು ಹೆಸರೇ ‘ಶ್ವಾನ’..! ಹಾವನ್ನು ತುಳಿಯಲಿದ್ದ ಮಗುವನ್ನು ಅಪಾಯದಿಂದ ಪಾರು ಮಾಡಿದ ‘ಕರಿಯ’..!ಏನಿದು ಘಟನೆ? ಇಲ್ಲಿದೆ ವರದಿ..

ನ್ಯೂಸ್‌ ನಾಟೌಟ್:’ಕೇಳಿದ್ದು ಸುಳ್ಳಾಗಬಹುದು ,ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವೂ ತಿಳಿಯುದು’ ಅನ್ನೋ ಹಳೇ ಹಾಡನ್ನು ನೀವೆಲ್ಲರೂ ಕೇಳಿರ್ತೀರಿ.ರಾಮ ಲಕ್ಷ್ಮಣ ಅನ್ನೋ ಮೂವಿಯಲ್ಲಿರುವ ಈ ಹಾಡು ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಸಣ್ಣ ಮಗುವಿನ ರಕ್ಷಣೆಗಾಗಿ ಮುಂಗುಸಿಯೊಂದು ತನ್ನ ಜೀವವನ್ನೇ ಪಣಕ್ಕಿಟ್ಟು ಹಾವಿನ ಮೇಲೆ ಹೋರಾಟ ಮಾಡುತ್ತದೆ.ಮಗುವನ್ನು ಬದುಕಿಸಿ ತಾನು ಸಾಕಿದ ಮನೆಯೊಡತಿಗೆ ನಿಯತ್ತಾಗಿರುತ್ತದೆ.ಇದೀಗ ಇದೇ ಘಟನೆಗೆ ಹೋಲಿಕೆಯಾಗುವ ಹಾಗೆ ಮತ್ತೊಂದು ಘಟನೆ ದ.ಕ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಸುಬ್ರಹ್ಮಣ್ಯದಿಂದ ವರದಿಯಾಗಿದೆ.ಶ್ವಾನವೊಂದು ನಾಗರಹಾವಿನಿಂದ ಮಗುವನ್ನು ರಕ್ಷಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನೇ ತಪ್ಪಿಸಿದೆ.

ಈ ಶ್ವಾನದ ಹೆಸರು ‘ಕರಿಯ’ ಎಂದು. ಬೀದಿ ನಾಯಿಯಾಗಿದ್ದರೂ ಇದು ಇಡೀ ಸುಬ್ರಹ್ಮಣ್ಯ ಪೇಟೆಯಲ್ಲಿಯೇ ಎಲ್ಲರ ಪ್ರೀತಿಗೆ ಪಾತ್ರವಾಗಿದೆ.ಹೌದು, ಇದೀಗ ತನ್ನ ಹೃದಯ ವೈಶಾಲ್ಯತೆಯಿಂದಲೂ ಎಲ್ಲರ ಮನಸನ್ನು ಗೆದ್ದಿದೆ.ಈ ಘಟನೆಯನ್ನು ಕಂಡು ಸ್ವತಃ ತಾಯಿಯೇ ಭಾವುಕರಾಗಿದ್ದಾರೆ.ಶ್ವಾನದ ನಿಷ್ಠೆಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಆದಿ ಸುಬ್ರಹ್ಮಣ್ಯದಲ್ಲಿ ಟೂರಿಸ್ಟ್ ಮಹಿಳೆಯೊಬ್ಬರು ಚಿಕ್ಕ ಮಗುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹಣ್ಣುಕಾಯಿ ತೆಗೆದುಕೊಳ್ಳುವುದಕ್ಕೆಂದು ತೆರಳಿದ್ದಾರೆ.ಅದೇ ಸಮಯದಲ್ಲಿ ಮಗು ರಸ್ತೆಗೆ ಬಂದಿದೆ. ಆದರೆ ಆ ವೇಳೆ ನಾಗರಹಾವೊಂದು ರಸ್ತೆ ದಾಟುತ್ತಿದ್ದು, ಮಗು ನಡೆದುಕೊಂಡು ಹೋಗುತ್ತಿತ್ತು.ಇನ್ನೇನೂ ಹಾವು ಸಮೀಪಿಸುತ್ತಿದ್ದಂತೆ ಮಲಗಿದ್ದ ಕರಿಯ ಓಡಿ ಹೋಗಿ ಮಗುವಿಗೆ ಅಡ್ಡ ಬಂದು ನಿಂತಿದೆ. ಒಂದು ವೇಳೆ ಶ್ವಾನ ಮಗುವಿಗೆ ಅಡ್ಡಲಾಗಿ ನಿಲ್ಲದೇ ಹೋಗಿದ್ದರೆ ಮಗು ಹಾವನ್ನು ತುಳಿದೇ ಬಿಡುತ್ತಿತ್ತು.ಆದರೆ ಕರಿಯ ಮಾತ್ರ ಅದಕ್ಕೆ ಅವಕಾಶವನ್ನೇ ಮಾಡಿಕೊಡದೇ ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ..!.

ಒಟ್ಟಿನಲ್ಲಿ ನೀವು ಹಾವು-ಮುಂಗುಸಿಯ ಕಥೆಯಲ್ಲಿ , ಮನೆ ಯಜಮಾನಿ ಮುಂಗುಸಿಯನ್ನು ಸಾಕಿರುತ್ತಾಳೆ.ಅದು ಮನೆಯೊಡತಿಗೆ ನಿಷ್ಟೆಯನ್ನು ತೋರಿಸುತ್ತದೆ.ಆದರೆ,ಈ ಕರಿಯ ಶ್ವಾನ ಮಾತ್ರ ಅದಕ್ಕೂ ಮಿಗಿಲು ಎಂಬಂತೆ ತನಗೆ ಪರಿಚಯನೇ ಇಲ್ಲದ ಮಗುವನ್ನು ರಕ್ಷಿಸಿ ಪುಣ್ಯದ ಕಾರ್ಯ ಮಾಡಿ ಭೇಷ್ ಎನಿಸಿಕೊಂಡಿದೆ.

Related posts

ಸುಳ್ಯ : ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ! ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಡಾ. ರೇಣುಕಾ ಪ್ರಸಾದ್ ಕೆ ವಿ

ವಯನಾಡು ಭೂಕುಸಿತ: ಕೇರಳಕ್ಕೆ ಬಂದಿಳಿದ ಪ್ರಧಾನಿ ಮೋದಿ..! ಭೂಕುಸಿತಕ್ಕೆ ಒಳಗಾದ ಪ್ರದೇಶಗಳಿಗೆ ಭೇಟಿ, ಸಂತ್ರಸ್ತರ ಜೊತೆ ಮಾತುಕತೆ..!

ಚಾರ್ಮಾಡಿ ಘಾಟಿಯಲ್ಲಿ ಆನೆ ಸವಾರಿ..! ಭಯಭೀತರಾದ ವಾಹನ ಸವಾರರು